ಬಳ್ಳಾರಿ:ಚಿಕ್ಕಿ ಘಟಕದಿಂದ ಬದುಕು ಕಟ್ಟಿಕೊಂಡಿದ್ದ ಮಾಜಿ ದೇವದಾಸಿಯರ ಕೂಡ್ಲಿಗಿ ದೇವದಾಸಿ ಸ್ವಾಲಂಬನಾ ಕೇಂದ್ರದ ಅಧ್ಯಕ್ಷೆ ವೆಂಕಮ್ಮ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕೂಡ್ಲಿಗಿ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ಅಭಿನಂದಿಸಿದ ಡಿಸಿ - ಜಿಲ್ಲಾಧಿಕಾರಿ ಎಸ್ಎಸ್ ನಕುಲ್
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ದೇವದಾಸಿ ಸ್ವಾಲಂಬನಾ ಕೇಂದ್ರದ ಅಧ್ಯಕ್ಷೆ ವೆಂಕಮ್ಮ ಹಾಗೂ ಪದಾಧಿಕಾರಿಗಳನ್ನು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿನಂದಿಸಿದ್ದಾರೆ.
ಅಭಿನಂದನೆ
ಸ್ವಾವಲಂಬನೆ ಬದುಕು ರೂಪಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗುವುದರ ಮೂಲಕ ಗಮನ ಸೆಳೆದಿದ್ದ ದೇವದಾಸಿ ಸ್ವಾಲಂಬನಾ ಕೇಂದ್ರದ ಅಧ್ಯಕ್ಷೆ ವೆಂಕಮ್ಮ ಹಾಗೂ ಪದಾಧಿಕಾರಿಗಳನ್ನು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಮ್ಮ ಕಚೇರಿಗೆ ಸೋಮವಾರ ಕರೆಯಿಸಿ ಅವರನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ನಾಗವೇಣಿ ಮತ್ತಿತರರು ಇದ್ದರು.