ಬಳ್ಳಾರಿ: ಗುಗ್ಗರಹಟ್ಟಿ ಪ್ರದೇಶದ ನಿವಾಸಿಯೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಘೋಷಿಸಿದ್ದಾರೆ.
ಗುಗ್ಗರಹಟ್ಟಿ ಕೊರೊನಾ ನಿರ್ಬಂಧಿತ ವಲಯ: ಜಿಲ್ಲಾಧಿಕಾರಿ ಘೋಷಣೆ
ಗುಗ್ಗರಹಟ್ಟಿ ಪ್ರದೇಶದ ನಿವಾಸಿಯೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಡಿಸಿ ಘೋಷಣೆ ಮಾಡಿದ್ದಾರೆ.
dc
ಗುಗ್ಗರಹಟ್ಟಿ ಬಡಾವಣೆಯಲ್ಲಿ ಮನೆ-ಮನೆ ಭೇಟಿ ಸಮೀಕ್ಷೆ ಕಾರ್ಯ ಇಂದಿನಿಂದ ಶುರುವಾಗಲಿದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯದ ನಿಯಂತ್ರಣ ವಿಧಿಸಲು ಸಹಾಯಕ ಆಯುಕ್ತರಿಗೆ ಸೂಚಿಸಿರುವುದಾಗಿ ಎಸ್.ಎಸ್.ನಕುಲ್ ತಿಳಿಸಿದರು.
ಈ ಪ್ರದೇಶದಿಂದ ಹೊರ ಹೋಗುವ, ಒಳ ಹೋಗುವ ಮಾರ್ಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ತರಕಾರಿ ಮತ್ತು ದಿನಸಿ ಖರೀದಿಗೆ ಒಂದು ಗಂಟೆಗಳ ಅವಕಾಶ ನೀಡಲಾಗುವುದು. ಪ್ರತಿದಿನ ಆಶಾ ಕಾರ್ಯಕರ್ತರು ಮನೆ-ಮನೆಗೆ ತೆರಳಿ, ಸಮೀಕ್ಷೆ ನಡೆಸಲಿದ್ದಾರೆ. ಅಲ್ಲದೇ, ಸಾರ್ವಜನಿಕ ಸಂಚಾರ ಸಂಪೂರ್ಣ ಬಂದ್ ಮಾಡಲಾಗುವುದು ಎಂದರು.
Last Updated : Apr 6, 2020, 3:45 PM IST