ಬಳ್ಳಾರಿ :ಸದ್ಯದ ಪರಿಸ್ಥಿತಿಯಲಿ ದಲಿತರ ಒಗ್ಗೂಡಿಕೆ ಅನಿವಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಎಸ್ ಆನಂದ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ದಲಿತರ ಒಗ್ಗೂಡಿಕೆ ಅನಿವಾರ್ಯ : ಸಚಿವ ಆನಂದ್ ಸಿಂಗ್ ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ಮಾಜಿ ಉಪ ಪ್ರಧಾನಿ ದಿ.ಡಾ. ಬಾಬು ಜಗಜೀವನರಾಮ್ ಅವರ ಜಯಂತ್ಯುತ್ಸವ ಕಾರ್ಯಕ್ರಮದ ನಿಮಿತ್ತ ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲಿ ದಲಿತರಲ್ಲಿ ಒಗ್ಗೂಡಿಕೆ ಮಾಯವಾಗುತ್ತಿದೆ. ಅದನ್ನ ಸರಿದೂಗಿಸುವ ಜವಾಬ್ದಾರಿಯನ್ನ ದಲಿತ ಮುಖಂಡರು ಮಾಡಬೇಕೆಂದು ಸಚಿವ ಆನಂದ್ ಸಿಂಗ್ ಕರೆ ನೀಡಿದರು.
ಬಾಬು ಜಗಜೀವನರಾಮ್ ಜಯಂತ್ಯುತ್ಸವ ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಡಿಸಿ ಪವನಕುಮಾರ್ ಮಾಲಪಾಟಿ ಸೇರಿ ಇತರ ಪ್ರಮುಖರು ಉಪಸ್ಥಿತರಿದ್ದರು.