ಕರ್ನಾಟಕ

karnataka

ETV Bharat / state

ದಾವಣಗೆರೆ ಮಹಿಳೆಗೆ ಕೊರೊನಾ... ಕಂಟೇನ್ಮೆಂಟ್​​​ ಝೋನ್​ ಆದ ಬಳ್ಳಾರಿಯ ಕೃಷ್ಣನಗರ! - ಕೊರೊನಾ ವೈರಸ್​

ಮೇ 4ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೃಷ್ಣಾ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ತಂಗಿದ್ದ ದಾವಣಗೆರೆ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಕೃಷ್ಣಾ ನಗರವನ್ನ ಕಂಟೇನ್ಮೆಂಟ್​ ಝೋನ್ ಎಂದು ಘೋಷಿಸಿ ಬೊಂಬುಗಳ ಮೂಲಕ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ.

By

Published : May 8, 2020, 4:22 PM IST

ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಕೃಷ್ಣಾ ನಗರವನ್ನ ಕಂಟೇನ್ಮೆಂಟ್​ ಝೋನ್ ಎಂದು ಘೋಷಿಸಿ ಬೊಂಬುಗಳ ಮೂಲಕ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ.

ಮೇ 4ರಂದು ದಾವಣಗೆರೆ ಮಹಿಳೆಯೊಬ್ಬರು ಬಳ್ಳಾರಿಯ ಕೃಷ್ಣಾ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಬಳಿಕ ಅವರು ಅನಾರೋಗ್ಯದಿಂದಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರ ವರದಿ ಕೊರೊನಾ ಪಾಸಿಟಿವ್​ ಬಂದಿದೆ.

ಹೀಗಾಗಿ ಕೃಷ್ಣಾ ನಗರವನ್ನ ಕಂಟೇನ್ಮೆಂಟ್​ ಝೋನ್ ಎಂದು ಘೋಷಿಸಲಾಗಿದೆ. 43 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 7 ಜನರನ್ನ ಕ್ವಾರಂಟೈನ್​ ಮಾಡಲಾಗಿದೆ.

ABOUT THE AUTHOR

...view details