ಬಳ್ಳಾರಿ :ಕೆಲ ಡಿ-ಗ್ರೂಪ್ ಸಿಬ್ಬಂದಿಗೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ. ಮನೆಯ ಯಜಮಾನ ಸಹ ಸರ್ಕಾರಿ ನೌಕರರಾಗಿದ್ದಾರೆ. ಆ ಸಿಬ್ಬಂದಿಗೆ ವಿನಾಯತಿ ಇಲ್ಲ. ಒಂದೊಂದು ವಾರ ಕೊರೊನಾ ವೈರಸ್ ಕೊಠಡಿಯಲ್ಲಿ ಕೆಲಸ ಮಾಡಿ ಎಂದು ಜೂನಿಯರ್ಗಳಿಗೆ ಮಾತ್ರ ಜಿಲ್ಲಾಸ್ಪತ್ರೆಯ ಅಧಿಕಾರಿಗಳು, ವೈದ್ಯರು ಒತ್ತಡ ಹಾಕುತ್ತಿದ್ದಾರೆ ಎಂದು ಮೌಖಿಕವಾಗಿ ಹೆಸರು ಹೇಳಲು ಇಚ್ಚಿಸದ ಡಿ - ಗ್ರೂಪ್ ಸಿಬ್ಬಂದಿ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದರು.
ಕರ್ತವ್ಯದಲ್ಲಿರುವ ಡಿ-ಗ್ರೂಪ್ ನೌಕರರು ನಮಗೂ ಚಿಕ್ಕಮಕ್ಕಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಶಂಕಿತರನ್ನು ದಾಖಲು ಮಾಡಿದ್ದಾರೆ. ಈ ವಾರ್ಡ್ನಲ್ಲಿ ಕೆಲಸ ಮಾಡಿ ಮನೆಗಳಿಗೆ ಹೋಗಿ ಈ ವೈರಸ್ ನಮಗೆ ಮತ್ತು ಮಕ್ಕಳಿಗೆ ಹರಡಿದರೆ ಯಾರು ಹೊಣೆ ಸರ್? ಎಂದು ತಮ್ಮ ನೋವು ಹೇಳಿಕೊಂಡರು.
ಕರ್ತವ್ಯ ನಿಭಾಯಿಸುತ್ತಿರುವ ಡಿ-ಗ್ರೂಪ್ ನೌಕರರು ಜಿಲ್ಲಾ ಶಸ್ತ್ರಚಿಕಿತ್ಸೆಯ ತಜ್ಞ ಡಾ.ಬಸರೆಡ್ಡಿ ಮಾತನಾಡಿ, ಕೊರೊನಾ ವೈರಸ್ ಶಂಕಿತರ ಕೊಠಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿಟ್ ವಿತರಣೆ ಮಾಡಿದ್ದಾರೆ. ಅದರಲ್ಲಿ ಪಿಪಿಇ, ಗ್ಲಾಸ್, ಮಾಸ್ಕ್, ಕ್ಯಾಪ್, ಶೂ ಹಾಗೂ ಸಾಕ್ಸ್ ನೀಡಿದ್ದಾರೆ ಎಂದರು.
ನೀರು ಅಂದುಕೊಂಡು ಸ್ಯಾನಿಟೈಸರ್ ಕುಡಿದ ಸಿಬ್ಬಂದಿ:ಕೊರೊನಾ ವೈರಸ್ ತಪಾಸಣೆ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ ರಾಜಶೇಖರ್ ಅವರು ಕುಡಿಯುವ ನೀರು ಎಂದು ತಿಳಿದು ಟೇಬಲ್ ಮೇಲೆ ನೀರಿನ ಬಾಟಲ್ನಲ್ಲಿಟ್ಟ ಸ್ಯಾನಿಟೈಜರ್ ಕುಡಿದು ತಕ್ಷಣವೇ ಉಗುಳಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು.
ಕರ್ತವ್ಯ ನಿಭಾಯಿಸುತ್ತಿರುವ ಡಿ-ಗ್ರೂಪ್ ನೌಕರರು ಕೊರೊನಾ ವೈರಸ್ ಸಂಬಂಧಿಸಿದ ರೋಗಿಗಳಿಗೆ ಈವರೆಗೂ ಜಿಲ್ಲಾಸ್ಪತ್ರೆಯಿಂದ 500 N-95 ಮಾಸ್ಕ್ ಮತ್ತು ಜಿಲ್ಲಾಧಿಕಾರಿ ಕಚೇರಿಯಿಂದ 500 ಮಾಸ್ಕ್ ವಿತರಣೆ ಮಾಡಲಾಗಿದೆ. ಇನ್ನೂ 100 ಮಾಸ್ಕ್ ಮಾತ್ರ ಉಳಿದಿದೆ ಎಂದು ಜಿಲ್ಲಾಸ್ಪತ್ರೆಯ ಸೂಪರಿಂಟೆಂಡೆಂಟ್ ತಿಳಿಸಿದರು. ಮಾಸ್ಕ್ ಖರೀದಿ ಮಾಡಲು ಹಣವಿದೆ. ಆದರೆ, ಮಾರಾಟ ಮಾಡಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಕರ್ತವ್ಯ ನಿಭಾಯಿಸುತ್ತಿರುವ ಡಿ-ಗ್ರೂಪ್ ನೌಕರರು ಕೊರೊನಾ ವೈರಸ್ ತಪಾಸಣೆ ಹೇಗೆ ಅಥವಾ ವಾರ್ಡ್ಗಳು ಹೇಗಿರಬೇಕು ಎಂಬ ತರಬೇತಿ ನೀಡಿಲ್ಲ. ಈವರೆಗೂ ಸುರಕ್ಷತಾ ಕಿಟ್ ಸಹ ನರ್ಸ್ಗಳಿಗೆ, ಡಿ-ಗ್ರೂಪ್ ನೌಕರರಿಗೆ ನೀಡಿಲ್ಲ ಎಂದು ನರ್ಸ್‌ವೊಬ್ಬರು ತಿಳಿಸಿದರು.
ಕರ್ತವ್ಯದಲ್ಲಿರುವ ಡಿ-ಗ್ರೂಪ್ ನೌಕರರು.. ಚಿಕ್ಕ ಮಕ್ಕಳಿರುವ ನಮಗೆ ವಿನಾಯಿತಿ ನೀಡಿ. ಹೊರರೋಗಿಗಳ ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಿ ಎಂದು ಜಿಲ್ಲಾ ವೈದ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.