ಕರ್ನಾಟಕ

karnataka

ETV Bharat / state

ಗಣಿನಾಡಲ್ಲಿ ಹೆಚ್ಚಾದ ಸೈಬರ್​​​​​​​​​ ಪ್ರಕರಣಗಳು: ಜಾಗೃತರಾಗಿರಲು ಎಸ್ಪಿ ಮನವಿ - ಬಳ್ಳಾರಿ ಜಿಲ್ಲಾ ಎಸ್ಪಿ ಸಿ.ಕೆ ಬಾಬಾ

ಬಹಳಷ್ಟು ಜನರು ಸೈಬರ್ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ. ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಪ್ರಕರಣಗಳಿಗೆ ಸಂಭವಿಸಿದಂತೆ ತನಿಖೆ ಮಾಡಿದ್ದಾರೆ. ಜನರು ಸಹ ಕಷ್ಟಪಟ್ಟು ದುಡಿದ ಹಣದ ಬಗ್ಗೆಯೂ ಕಾಳಜಿಯಿಂದ ಇರಬೇಕು ಎಂದು ಎಸ್ಪಿ ಸಿ.ಕೆ.ಬಾಬಾ ಮನವಿ ಮಾಡಿದ್ದಾರೆ.

Bellary  SP C.K. Baba
ಎಸ್ಪಿ ಸಿ.ಕೆ ಬಾಬಾ

By

Published : Feb 4, 2020, 11:05 AM IST

ಬಳ್ಳಾರಿ: ಗಣಿನಾಡಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದು ಜಿಲ್ಲಾ ಎಸ್ಪಿ ಸಿ.ಕೆ.ಬಾಬಾ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಸೈಬರ್ ಕ್ರೈಂ ಠಾಣೆ ಜೂನ್​ 6, 2017ರಂದು ಪ್ರಾರಂಭವಾಗಿದೆ. ಪ್ರಸ್ತುತ ಒಬ್ಬ ಇನ್ಸ್​ಪೆಕ್ಟರ್, ಇಬ್ಬರು ಪಿಎಸ್ಐ ಸೇರಿದಂತೆ 27 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಳ್ಳಾರಿ ಎಸ್ಪಿ ಸಿ.ಕೆ.ಬಾಬಾ

ಸೈಬರ್ ಪ್ರಕರಣಗಳ ಅಂಕಿ-ಅಂಶ:

2017ರಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. 2018ರಲ್ಲಿ 4 , 2019 ರಲ್ಲಿ 63, 2020 ಜವರಿನ 31ರವರೆಗೆ 10 ಪ್ರಕರಣ ಸೇರಿ ಒಟ್ಟು 77 ಪ್ರಕರಣಗಳು ಬಳ್ಳಾರಿ ಸೈಬರ್ ಠಾಣೆಯಲ್ಲಿ ದಾಖಲಾಗಿವೆ. ಇದರಲ್ಲಿ ಉದ್ಯಮಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಗೃಹಿಣಿಯರು, ಕಾರ್ಮಿಕರು ಮೋಸ ಹೋಗಿದ್ದಾರೆ ಎಂದು ತಿಳಿಸಿದರು.

ಜಾಗೃತಿಗಾಗಿ ಪೊಲೀಸ್ ಇಲಾಖೆ ಕಾರ್ಯ:

ಪೊಲೀಸ್ ಇಲಾಖೆಯಿಂದ ಕಳೆದ ನಾಲ್ಕು ವರ್ಷಗಳಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೂರಾರು ಶಾಲಾ-ಕಾಲೇಜು, ಸಂಘ, ಸಂಸ್ಥೆಗಳು, ಎನ್​ಜಿಒ ಮತ್ತು ಸಾರ್ವಜನಿಕರಿಗೆ ಕರಪತ್ರ ಹಂಚುವುದರ ಮೂಲಕ ಸೈಬರ್ ಅಪರಾಧ ತಡೆಗೆ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತರಿಸುವ ಕಾರ್ಯ ಮಾಡಲಾಗಿದೆ.

ಇನ್ನು 25ರಿಂದ 30 ಪ್ರಕರಣಗಳಲ್ಲಿ ಮೋಸ ಹೋದ ಸಾರ್ವಜನಿಕರಿಗೆ ಚಾರ್ಜ್​ಶೀಟ್ ನಂತರ ಬ್ಯಾಂಕಿನಿಂದ ಮರಳಿ ಹಣವನ್ನು ಕೊಡಿಸಿದ್ದೇವೆ ಎಂದು ತಿಳಿಸಿದರು. ಇದನ್ನು ನೋಡಿದ್ರೆ ಬಳ್ಳಾರಿ ಜಿಲ್ಲೆಯಲ್ಲಿ‌ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಜನರು ಸಹ ಜಾಗೃತರಾಗಬೇಕು. ಯಾವುದೇ ಬ್ಯಾಂಕ್​ಗೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ ಮೂಲಕ ಯಾವುದೇ ವ್ಯಕ್ತಿಗೆ ನೀಡಿದೆ, ನೇರವಾಗಿ ಬ್ಯಾಂಕ್​ಗೆ ಹೋಗಿ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮನವಿ ಮಾಡಿಕೊಂಡರು.

ABOUT THE AUTHOR

...view details