ಹೊಸಪೇಟೆ:ಮೂಢನಂಬಿಕೆ, ಮೌಢ್ಯತೆಯನ್ನು ಇಟ್ಟುಕೊಂಡು ನಾವು ರಾಜಕಾರಣ ಮಾಡುವುದಿಲ್ಲ, ಅದೇನಿದ್ರು ಕಾಂಗ್ರೆಸ್ ಪಕ್ಷದವರ ಕೆಲಸವೆಂದು ಹಂಪಿಯಲ್ಲಿಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ಆಂಜನ ಹಚ್ಚುವುದು ಕಾಂಗ್ರೆಸ್ ಪಕ್ಷ ಬಿ.ಜೆ.ಪಿ.ಅಲ್ಲ: ಸಚಿವ ಸಿ.ಟಿ.ರವಿ ಟಾಂಗ್ ಇಂದು ಸಂಜೆ ಐತಿಹಾಸಿಕ ಹಂಪಿಗೆ ಭೇಟಿ ನೀಡಿದ್ದ ಅವರು, ಯಡಿಯೂರಪ್ಪನವರ ಆಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಬಿ.ಎಸ್. ಯಡಿಯೂರಪ್ಪನವರು ಸರ್ವಾನುಮತದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆಂಜನ ಹಚ್ಚುವ ಕೆಲಸವೇನಿದ್ದರೂ, ಕಾಂಗ್ರೆಸ್ನವರದ್ದು. ಆಡಿಯೋ ಪ್ರಕರಣ ನ್ಯಾಯಾಲಯದಲ್ಲಿದೆ. ತನಿಖೆ ನಡೆಯುತ್ತಿದೆಯೆಂದು ಪ್ರತಿಕ್ರಿಯಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸ್ಟಡಿ ಟೂರ್ ಯೋಜನೆ ಹಾಕಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ಆಂಜನೇಯ ದೇವರ ದರ್ಶನವನ್ನು ಪಡೆದು, ಸಂಜೆ ಸಮಯಕ್ಕೆ ಐತಿಹಾಸಿಕ ಹಂಪಿಗೆ ಭೇಟಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯವು ವಿಶ್ವ ಮಟ್ಟದ ಪ್ರವಾಸೋದ್ಯಮ ಸ್ಥಳವಾಗಿರುವುದರಿಂದ ಇಲ್ಲಿನ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದೇವೆ. ಹಂಪಿಯ ಉತ್ಸವ ಹಾಗೂ ಆನೆಗೊಂದಿಯ ಉತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.
ಇನ್ನು, ಪ್ರವಾಸೋದ್ಯಮ ಸಚಿವನಾಗಿ ನಾನು ಎಲ್ಲ ರೀತಿಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇನೆ. ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡುತ್ತೇನೆಂದು ಹೇಳಿದರು.