ಕರ್ನಾಟಕ

karnataka

ETV Bharat / state

ಬಸವಣ್ಣ ಕಾಲುವೆ ಬಳಿ ಮೊಸಳೆ ಪ್ರತ್ಯಕ್ಷ: ಸ್ಥಳೀಯರಲ್ಲಿ‌ ಆತಂಕ - Old amaravathi basavanna canal

ಹೊಸಪೇಟೆಯ ಹಳೇ ಅಮರಾವತಿಯ ಬಸವಣ್ಣ ಕಾಲುವೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

Crocodile
Crocodile

By

Published : Sep 11, 2020, 10:33 AM IST

ಹೊಸಪೇಟೆ: ಹಳೇ ಅಮರಾವತಿಯ ಬಸವಣ್ಣ ಕಾಲುವೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ಎರಡು ದಿನಗಳಿಂದ ಹೊಸಪೇಟೆಯಲ್ಲಿ ಸತತವಾಗಿ ಉತ್ತಮವಾಗಿ‌ ಮಳೆಯಾಗುತ್ತಿದ್ದು, ಕಾಲುವೆ ನೀರಿನೊಂದಿಗೆ ಮೊಸಳೆ ಬಂದಿರಬಹುದು ಎನ್ನಲಾಗಿದೆ.

ಈ ಕುರಿತು ಆರ್​​​ಎಫ್​​​ಒ ವಿನಾಯಕ ಮಾತನಾಡಿ, ಕಾಲುವೆ ನೀರಿ‌ನ ಮೂಲಕ ಮೊಸಳೆ ಬಂದಿರಬಹುದು. ಘಟನಾ ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಕಳುಹಿಸಲಾಗಿದೆ. ಸುತ್ತಮುತ್ತಲಿನ ಜನರು ಮೊಸಳೆಗಳು ಕಂಡು ಬಂದರೆ ತುಂಗಭದ್ರಾ ಜಲಾಶಯದಲ್ಲಿ ಬಿಡುತ್ತಾರೆ. ಜಲಾಶಯದ ನೀರಿನ ರಭಸಕ್ಕೆ ಕಾಲುವೆ ಮೂಲಕ ಮೊಸಳೆ ಬಂದಿರಬಹುದು ಎಂದರು.

ABOUT THE AUTHOR

...view details