ಬಳ್ಳಾರಿ:ಗಣಿನಗರಿ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ ದಿನವನ್ನು ಆಚರಿಸಲಾಯಿತು. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪಿಎಸ್ಐ ತಾರಾ ಅವರು ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಬಳ್ಳಾರಿ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ - Criminal prevention Program at Bellary
ರೈಲ್ವೇ ಪಿಎಸ್ಐ ತಾರಾ ಅವರು ರೈಲು ಪ್ರಯಾಣಿಕರಿಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ನಿರ್ವಹಿಸಿದ್ದಾರೆ.
ಬಳಿಕ, ಪ್ಯಾಸೆಂಜರ್ ರೈಲು ಪ್ರಯಾಣಿಕರ ಬಳಿ ತೆರಳಿದ ತಾರಾಬಾಯಿ, ಕರಪತ್ರ ಹಂಚುವ ಮುಖೇನ ರೈಲುಗಾಡಿ ಅಥವಾ ರೈಲು ನಿಲ್ದಾಣದಲ್ಲಿನ ಅಪರಾಧ ತಡೆಗಟ್ಟುವ ವಿಧಾನದ ಕುರಿತು ಜಾಗೃತಿ ಮೂಡಿಸಿದ್ರು. ಆ ಮೂಲಕ ರೈಲುಗಾಡಿ ಪ್ರಯಾಣಿಕರ ವಿಶೇಷ ಗಮನ ಸೆಳೆದ್ರು.
ಅಪರಿಚಿತರು ನೀಡಿರೊ ತಿಂಡಿ- ತಿನಿಸು ಹಾಗೂ ಪ್ರಯಾಣಿಕರನ್ನ ಯಾಮಾರಿಸೊರಿಂದ ಎಚ್ಚರಿಕೆ ವಹಿಸಬೇಕು. ರೈಲು ಪ್ರಯಾಣಿಸುತ್ತಿರುವಾಗ ತಮ್ಮ ಲಗೇಜ್ಗಳ ಮೇಲೆ ನಿಗಾವಹಿಸ ಬೇಕು. ಚಿನ್ನಾಭರಣ ಹಾಗೂ ಮಾಂಗಲ್ಯ ಸರದ ಮೇಲೆ ಪ್ರಯಾಣಿಕರು ಅತಿಯಾದ ನಿಗಾ ಇರಿಸಿಕೊಳ್ಳಬೇಕು. ತಮ್ಮ ಸಾಮಾಗ್ರಿಗಳು ಕಳುವಾದ ಕುರಿತು ಕೂಡಲೇ ಟಿಟಿ ಅವರ ಗಮನಕ್ಕೆ ತರಬೇಕೆಂದು ರೈಲ್ವೇ ಪಿಎಸ್ಐ ತಾರಾ ಕೋರಿದ್ದಾರೆ.
TAGGED:
Bellary Railway Station