ಕರ್ನಾಟಕ

karnataka

ETV Bharat / state

ನಗರ ಬಸ್ ನಿಲ್ದಾಣದಲ್ಲೇ ಬೀಡುಬಿಟ್ಟ ಬಿಡಾಡಿ ದನಗಳು! - ಬಸ್ ನಿಲ್ದಾಣ

ನಗರದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಅತ್ಯಾಧುನಿಕ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ ನಿಲ್ದಾಣದ ಸೌಂದರ್ಯೀಕರಣಕ್ಕಾಗಿ ಮುಂಭಾಗದಲ್ಲಿ ಹುಲ್ಲು ಹಾಸಿಗೆಯನ್ನು ನಿರ್ಮಿಸಲಾಗಿದೆ.‌ ಆದರೀಗ ಅದು ಜಾನುವಾರುಗಳಿಗೆ ಆಹಾರ ಒದಗಿಸುವ ತಾಣವಾಗಿ ಪರಿಣಮಿಸಿದೆ.

Bellary district

By

Published : Aug 9, 2019, 9:39 AM IST

ಬಳ್ಳಾರಿ :ನಗರದ ಹೃದಯ ಭಾಗದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಡಾಡಿ ದನಗಳು ಬೀಡು ಬಿಟ್ಟಿವೆ.

ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ದನಗಳು..

ನಗರದ ಗಡಿಗಿ ಚನ್ನಪ್ಪ ವೃತ್ತದಿಂದ ಅಣತಿ ದುರದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅತ್ಯಾಧುನಿಕವಾಗಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ ನಿಲ್ದಾಣದ ಸೌಂದರ್ಯೀಕರಣಕ್ಕಾಗಿ ಮುಂಭಾಗದಲ್ಲಿ ಹುಲ್ಲು ಹಾಸಿಗೆಯನ್ನು ನಿರ್ಮಿಸಲಾಗಿದೆ.‌ ಆದರೀಗ ಅದು ಜಾನುವಾರುಗಳಿಗೆ ಆಹಾರ ಒದಗಿಸುವ ತಾಣವಾಗಿ ಪರಿಣಮಿಸಿದೆ.

ಬೀಡುಬಿಟ್ಟ ಹತ್ತಾರು ಬಿಡಾಡಿ ದನಗಳು:
ಬಸ್ ನಿಲ್ದಾಣದ ಹುಲ್ಲನ್ನು ಮೇಯುತ್ತ ದನಗಳು ಇಲ್ಲೇ ಬೀಡು ಬಿಟ್ಟಿವೆ. ಅವುಗಳ ನಿಯಂತ್ರಣಕ್ಕೆ ಕೆಎಸ್​ಆರ್​ಟಿಸಿ ನೌಕರರು ಮುಂದಾಗುತ್ತಿಲ್ಲ. ಸಾರ್ವಜನಿಕರೂ ಕೂಡ ತಮಗರಿವಿಲ್ಲದಂತೆ ಓಡಾಡಿಕೊಂಡೆ ಕಾಲ ಕಳೆಯುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ABOUT THE AUTHOR

...view details