ವಿಜಯನಗರ: ನಾಲ್ಕು ಕಾಲುಗಳನ್ನು ಹೊಂದಿರುವ ಪ್ರಾಣಿಗಳು, ನಾಲ್ಕು ಕಾಲಿನ ಮರಿಗಳನ್ನು ಹಾಕುವುದು ಸಹಜ, ಆದರೆ ಇಲ್ಲೊಂದು ಹಸು ಅಪರೂಪದ ವಿಶಿಷ್ಟ ಎರಡು ಕಾಲು ಹೊಂದಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ರೈತ ಪುಂಡಿ ವಿಜಯಕುಮಾರ್ ಎಂಬವರಿಗೆ ಸೇರಿದ ಹಸು ಎರಡೇ ಕಾಲುಗಳಿರೋ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಕಳೆದ ವರ್ಷಗಳ ಹಿಂದೆ ತಾಲೂಕಿನ ಚೌಡಪುರ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತ್ತು. ಇಂತಹ ಅಪರೂಪದ ಕರು ಇದೀಗ ಗುಡೇಕೋಟೆ ಗ್ರಾಮದಲ್ಲಿ ಜನಿಸಿದೆ.
ಇದನ್ನೂ ಓದಿ:ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದ ಹಸು: ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು
ತುಮಕೂರಿನಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ್ದ ಹಸು:ಇತ್ತೀಚಿಗೆ, ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದ ಅಪರೂಪದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹಟ್ಟಿಯಲ್ಲಿ ನಡೆದಿತ್ತು. ಮುನಿಯಪ್ಪ ಮತ್ತು ಕರಿಯಮ್ಮ ಎಂಬವರಿಗೆ ಸೇರಿದ ಹಸು 3 ಗಂಡು ಮತ್ತು 1 ಹೆಣ್ಣು ಕರುಗಳಿಗೆ ಜನ್ಮ ನೀಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪಶು ವೈದ್ಯಾಧಿಕಾರಿ ಡಾ. ಶಂಕರಪ್ಪ ತಪಾಸಣೆ ನಡೆಸಿದ್ದರು. ಒಂದು ಗಂಡು ಕರು ಹುಟ್ಟಿದ ತಕ್ಷಣ ಮೃತಪಟ್ಟಿತ್ತು. ಮೂರು ಕರುಗಳು ಆರೋಗ್ಯವಾಗಿವೆ ಎಂದು ಅವರು ತಿಳಿಸಿದ್ದರು.