ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಕೊವ್ಯಾಕ್ಸಿನ್ ಖಾಲಿ: ಮನೆಗೆ ವಾಪಸ್​ ತೆರಳುತ್ತಿರುವ ಜನ

ಏ.19 ರಂದು‌ ಸಂಜೆ ಕೊರೊನಾ ಲಸಿಕೆ ಖಾಲಿಯಾಗಿವೆ. ಈಗಾಗಲೇ ಲಸಿಕೆ ಬೇಡಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏ.23ಕ್ಕೆ ಲಸಿಕೆ ಬರುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಭಾಸ್ಕರ್ ತಿಳಿಸಿದ್ದಾರೆ.

hospet
ಹೊಸಪೇಟೆ

By

Published : Apr 20, 2021, 2:13 PM IST

ಹೊಸಪೇಟೆ: ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ (ನೂರರ ಹಾಸಿಗೆ) ಕೊವ್ಯಾಕ್ಸಿನ್ ಖಾಲಿಯಾಗಿದ್ದು, ಜನರು ಮರಳಿ ಮನೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

2ನೇ ಹಂತದಲ್ಲಿ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, 45 ವರ್ಷದ ಮೇಲ್ಪಟ್ಟವರು ಕೊರೊನಾ‌ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಆದರೆ, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ‌ ಕೊರೊನಾ ಲಸಿಕೆ ಹಾಕುವ ಕೊಠಡಿಗೆ ಬೀಗ ಜಡಿಯಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಇಲ್ಲ ಎಂದು ಹೇಳುತ್ತಿದ್ದಾರೆ.

ಕೊವ್ಯಾಕ್ಸಿನ್ ಖಾಲಿ: ಮನೆಗೆ ವಾಪಸ್​ ತೆರಳುತ್ತಿರುವ ಜನರು..

ವೃದ್ಧ ಶ್ರೀನಿವಾಸ ಅವರು ಮಾತನಾಡಿ, ಒಂದು ಲಸಿಕೆ ಹಾಕಿಸಿಕೊಂಡಿದ್ದೇನೆ. ಇನ್ನೊಂದು ಲಸಿಕೆ ಹಾಕಿಸಿಕೊಳ್ಳಲು ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

ABOUT THE AUTHOR

...view details