ಹೊಸಪೇಟೆ: ನಗರದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೋವಿಡ್-19 ಜಾಗೃತಿ ಜಾಥಾ ನಡೆಸಿದರು.
ಕಾನೂನು ಸೇವಾ ಸಮಿತಿ ಹಾಗೂ ಆರೋಗ್ಯ ಇಲಾಖೆಯಿಂದ ಕೋವಿಡ್-19 ಜಾಗೃತಿ ಜಾಥಾ
ಹೊಸಪೇಟೆಯಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೋವಿಡ್-19 ಜಾಗೃತಿ ಜಾಥಾ ನಡೆಸಿದರು.
ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಿಂದ ಪ್ರಾರಂಭವಾದ ಜಾಥಾ ಅಂಬೇಡ್ಕರ್, ರೋಟರಿ ವೃತ್ತ, ನಗರಸಭೆ, ತರಕಾರಿ ಮಾರ್ಕೆಟ್ ಮಾರ್ಗವಾಗಿ ತಾಲೂಕು ವೈದ್ಯಾಧಿಕಾರಿ ಕಚೇರಿ ಬಳಿ ಸಮಾಪ್ತಿಯಾಯಿತು. ಸಿವಿಲ್ ಹಿರಿಯ ನ್ಯಾಯಾಧೀಶ ಆನಂದ ಚೌವ್ಹಾಣ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕೊರೊನಾ ವೈರಸ್ನ್ನು ತಿರಸ್ಕಾರ ಮನೋಭಾವನೆಯಿಂದ ಕಾಣಬಾರದು. ಜನರು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಅಥವಾ ಸಾಬೂನಿಂದ ಕೈಯನ್ನು ಪದೇ ಪದೇ ತೊಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಶಿವನಗೌಡ, ಆನಂದ ಕರಮ್ಮನವರ್, ತೃಪ್ತಿ ಧರಣಿ, ಶಶಿಕಲಾ, ಟಿಎಚ್ ಒ ಡಾ.ಡಿ.ಭಾಸ್ಕರ್, ವಕೀಲ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಇನ್ನಿತರರಿದ್ದರು.