ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನ್ಯಾಯಾಲಯವನ್ನು ಇಂದು ಸೀಲ್ಡೌನ್ ಮಾಡಲಾಗಿದೆ. ನ್ಯಾಯಾಲಯದ ಐದು ಜನ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.
ಐದು ಜನ ಸಿಬ್ಬಂದಿಗೆ ಕೊರೊನಾ: ಕೋರ್ಟ್ ಸೀಲ್ಡೌನ್! - ಕೊರೊನಾ ಪ್ರಕರಣಗಳು ಹೆಚ್ಚಳ
ಏ. 7ರಂದು ಒಂದೇ ದಿನ ನ್ಯಾಯಾಲಯದ ಐವರು ಸಿಬ್ಬಂದಿ ಸೇರಿದಂತೆ 14ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.
court-sealed-down
ಮುನ್ನಚ್ಚರಿಕಾ ಕ್ರಮವಾಗಿ ಸೀಲ್ಡೌನ್ ಮಾಡಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಏ. 7ರಂದು ಒಂದೇ ದಿನ ನ್ಯಾಯಾಲಯದ ಐವರು ಸಿಬ್ಬಂದಿ ಸೇರಿದಂತೆ 14ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.
ಅಲ್ಲದೇ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ರ್ಯಾಪಿಡ್ ತಪಾಸಣೆ ಪರೀಕ್ಷಾ ವಿಧಾನವನ್ನು ಹೆಚ್ಚು ಮಾಡಲು ಮುಂದಾಗಿದೆ.