ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಸತಿ ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ. ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹ್ಯಾಳ್ಯಾದ ಓಬಣ್ಣ (58) ಮತ್ತು ಪತ್ನಿ ನಿಂಗಮ್ಮ (47) ಸಾವಿಗೀಡಾದ ದಂಪತಿ.
ಬಳ್ಳಾರಿ: ಸಾವಿನಲ್ಲೂ ಒಂದಾದ ದಂಪತಿ - Couple death in bellary
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಸಾವಿನಲ್ಲಿಯೂ ಸತಿಪತಿಗಳು ಒಂದಾಗಿದ್ದಾರೆ. ಇಬ್ಬರ ಮೃತದೇಹವನ್ನು ಅಕ್ಕಪಕ್ಕದಲ್ಲಿ ಹೂಳುವ ಮುಖೇನ ಅಂತ್ಯಕ್ರಿಯೆ ನೆರವೇರಿಸಲಾಯಿತು.
![ಬಳ್ಳಾರಿ: ಸಾವಿನಲ್ಲೂ ಒಂದಾದ ದಂಪತಿ ಬಳ್ಳಾರಿಯಲ್ಲಿ ಸಾವಿನಲ್ಲೂ ಒಂದಾದ ದಂಪತಿ](https://etvbharatimages.akamaized.net/etvbharat/prod-images/768-512-9156035-thumbnail-3x2-dd.jpg)
ಬಳ್ಳಾರಿಯಲ್ಲಿ ಸಾವಿನಲ್ಲೂ ಒಂದಾದ ದಂಪತಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಪತ್ನಿ ನಿಂಗಮ್ಮ ಮೃತಪಟ್ಟಿದ್ದು, ರಾತ್ರಿ ಇಡೀ ಭಜನೆ ಮಾಡಲಾಗುತ್ತಿತ್ತು. ಆದರೆ ಓಬಣ್ಣ ಸೋಮವಾರ ಬೆಳಗ್ಗಿನ ಜಾವ 4 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಸಾವಿನಲ್ಲಿ ಒಂದಾದ ಸತಿ-ಪತಿಗಳಿಬ್ಬರ ಮೃತದೇಹವನ್ನು ಅಕ್ಕಪಕ್ಕದಲ್ಲಿ ಹೂಳುವ ಮುಖೇನ ಅಂತ್ಯಕ್ರಿಯೆ ನೆರವೇರಿಸಲಾಯಿತು.