ಬಳ್ಳಾರಿ: ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ನಗರದ ಬಂಡಿಹಟ್ಟಿಯಲ್ಲಿ ಇಂದು ನಡೆದಿದೆ. ಮೃತ ದಂಪತಿಯನ್ನು ಈರಣ್ಣ(28), ಪತ್ನಿ ದುರ್ಗಮ್ಮ(25) ಎಂದು ಗುರುತಿಸಲಾಗಿದೆ. ದಂಪತಿ ಸಾವಿನಿಂದಾಗಿ 16 ತಿಂಗಳ ಮಗು ಅನಾಥವಾಗಿದೆ.
ಕುಡಿತದ ಚಟಕ್ಕೆ ದಾಸನಾಗಿದ್ದ ಈರಣ್ಣ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಪತ್ನಿ ದುರ್ಗಮ್ಮ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಾಕುತ್ತಿದ್ದಳು. ಅಲ್ಲದೆ ಈರಣ್ಣ ಕುಡಿಯಲು ಪತ್ನಿ ದುರ್ಗಮ್ಮ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈರಣ್ಣನು ಹೆಂಡತಿ ದುಡಿದ ಹಣ ಕಿತ್ತುಕೊಂಡು ಮದ್ಯ ಸೇವನೆ ಮಾಡುತ್ತಿದ್ದನು. ಅಲ್ಲದೆ ಹಣ ನೀಡದಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ.