ವಿಜಯನಗರ: ಸಚಿವ ಆನಂದ್ ಸಿಂಗ್ ದೌರ್ಜನ್ಯ ಆರೋಪ ಪ್ರಕರಣ ಸದ್ಯಕ್ಕೆ ಮುಗಿಯುವ ಸಾಧ್ಯತೆಗಳಿಲ್ಲ. ನಿತ್ಯ ಹೊಸಹೊಸ ರೂಪ ಪಡೆದುಕೊಳ್ತಿದೆ. ಇದೀಗ ಮಿನಿಸ್ಟರ್ ವರ್ಸಸ್ ಕಾರ್ಪೋರೇಟರ್ ಹಂತಕ್ಕೆ ತಲುಪಿದ್ದು, ಇಬ್ಬರೂ ಪರಸ್ಪರ ರಾಜೀನಾಮೆ ಕೊಡೊ ಚಾಲೆಂಜ್ ಹಾಕಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಅವರು ಇತ್ತೀಚೆಗೆ ಪ್ರೆಸ್ ಮೀಟ್ ಮಾಡಿ, ತಮ್ಮ ಮೇಲಿರೋ ಭೂ ಕಬಳಿಕೆ ಆರೋಪ ಸುಳ್ಳು ಅಂತ ಹೇಳಿದರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿರುವ ಹೊಸಪೇಟೆ ನಗರಸಭೆ 6 ನೇ ವಾರ್ಡ್ನ ಕಾರ್ಪೋರೇಟರ್ ಖದೀರ್ ಆನಂದ್ ಸಿಂಗ್ ಅವರ ಮನೆಯ ನಿರ್ಮಾಣವೇ ಅಕ್ರಮ ಅಂತ ದಾಖಲೆ ಬಿಡುಗಡೆ ಮಾಡಿದ್ರು.
ಈ ವೇಳೆ ಚಾಲೆಂಜ್ ಹಾಕಿರೋ ಅವರು, ಆನಂದ್ ಸಿಂಗ್ ಅವರೇ ನಿಮ್ಮ ಅಕ್ರಮ ಸಾಬೀತು ಮಾಡಿದ್ದೀನಲ್ಲ ಈಗ ರಾಜೀನಾಮೆ ಕೊಡಿ. ನೀವು ಅಕ್ರಮ ಮಾಡಿಲ್ಲ ಅಂತ ಸಾಬೀತು ಮಾಡಿದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂತ ಸವಾಲೆಸೆದಿದ್ದಾರೆ.
ವರದಿಯನ್ನೇ ಚಾಲೇಂಜ್ ಮಾಡ್ತೇವಿ:ಹೊಸಪೇಟೆಯ ಬೈಪಾಸ್ ರಸ್ತೆಯ ಬಳಿ ಸಚಿವ ಆನಂದ್ ಸಿಂಗ್ ನಿರ್ಮಾಣ ಮಾಡಿರೋ ಮನೆಗಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ಸರ್ವೆ 63 ರ ಬಗ್ಗೆ ನಮಗೂ ತಕರಾರು ಇದೆ. ಈ ವರದಿಯನ್ನು ನಾವು ಚಾಲೆಂಜ್ ಮಾಡುತ್ತೇವೆ. ಸಚಿವರ ಭೂ ಒತ್ತುವರಿ ಬಗ್ಗೆ ಕಾನೂನಾತ್ಮಕ ಹೋರಾಟ ಕೂಡ ಮಾಡುತ್ತೇವೆ. ಸಚಿವ ಆನಂದ ಸಿಂಗ್ ಅವರು ಸರ್ವೆ ನಂ. 66 ಬಿ 2 ರಲ್ಲಿ ಚರಂಡಿ ಜಾಗ 5 ಸೆಂಟ್ಸ್ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದೇವೆ ಎಂದರು.