ಬಳ್ಳಾರಿ: ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗಣಿನಾಡಿನ ಮನೆಗೆಲಸದ ಮಹಿಳೆಯರ ಪಾಡು ಚಿಂತಾಜನಕವಾಗಿದೆ. ನಗರ ಮತ್ತು ಪಟ್ಟಣಗಳಲ್ಲಿ ನೆಲೆಸಿರುವ ಧನಿಕರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಅತ್ತ ಕೆಲಸವೂ ಇಲ್ಲದೇ ಇತ್ತ ಸಂಬಳ, ಊಟವೂ ಸಿಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
'ಧನಿಕರ ಮನೆಯಲ್ಲಿ ಕೆಲಸವಿಲ್ಲ; ಮನೆಯಲ್ಲಿ ರೇಷನ್ ಇಲ್ಲ': ಮನೆಗೆಲಸದ ಮಹಿಳೆಯರ ಪಾಡು ಕೇಳಿ.. - ಲಾಕ್ ಡೌನ್ ಎಫೆಕ್ಟ್
'ಮನೆಯಲ್ಲಿ ಮಕ್ಕಳು, ವೃದ್ಧರು ಹಸಿವಿನಿಂದ ಬಳಲುತ್ತಿದ್ದಾರೆ. ಕನಿಷ್ಠ ರೇಷನ್ ಕೂಡಾ ನಮ್ಮ ಮನೆಯಲ್ಲಿಲ್ಲ. ಹೊರಗೆ ಬಂದ್ರೆ ಪೋಲಿಸರು ಹೊಡೆದೋಡಿಸುತ್ತಾರೆ. ಹಸಿವಿನಿಂದ ಬಳಲುವ ಮಕ್ಕಳ ಮುಖ ನೋಡಲಾಗುತ್ತಿಲ್ಲ. ನಾವು ಕೊರೊನಾ ಬಂದು ಸಾಯೋದಕ್ಕೂ ಮುಂಚೆಯೇ ಹಸಿವಿನಿಂದ ನಾವು ಸಾಯೋದು ಖಚಿತ'.
ಮನೆಗೆಲಸಕ್ಕೆ ಹೋದ್ರೆ ಮನೆಯ ಮಾಲೀಕರು ಕೆಲಸಕ್ಕೆ ಬರಬೇಡಿ ಅಂತ ಹೇಳುತ್ತಾರೆ. ಮನೆಯಲ್ಲೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೂ ನಮ್ಮ ಬಳಿ ಹಣವಿಲ್ಲ. ಈವರೆಗೂ ನಮ್ಮ ಪರಿಸ್ಥಿತಿಯನ್ನು ಯಾರೂ ಕೇಳುವವರಿಲ್ಲ. ಜಿಲ್ಲಾಡಳಿತ ಕೂಡ ನಮ್ಮ ನೆರವಿಗೆ ಧಾವಿಸಿಲ್ಲ ಎಂದು ಗೌತಮ ನಗರದ ನಿವಾಸಿ ಮಂಜುಳ ಅಳಲು ತೋಡಿಕೊಂಡರು.
ಗಡಿಗಿ ಚನ್ನಪ್ಪ ವೃತ್ತದ ಬಳಿಯಿರುವ ಸುಕೋ ಬ್ಯಾಂಕಿನಲ್ಲಿ ಮೂರು ತಿಂಗಳಿಗೆ 10 ಸಾವಿರ ರೂ. ಸಾಲ ಕೊಡ್ತಾರೆ ಅಂತ ಬ್ಯಾಂಕಿನ ಮುಂದೆ ಮನೆಕೆಲಸದ ಮಹಿಳೆಯರು ಸಾಲು ಸಾಲಾಗಿ ನಿಂತಿದ್ದರು. ಮನೆಯಲ್ಲಿ ಮಕ್ಕಳು, ವೃದ್ಧರು ಹಸಿವಿನಿಂದ ಬಳಲುತ್ತಿದ್ದಾರೆ. ಕನಿಷ್ಠ ರೇಷನ್ ಕೂಡಾ ನಮ್ಮ ಮನೆಯಲ್ಲಿಲ್ಲ. ಹೊರಗೆ ಬಂದ್ರೆ ಪೋಲಿಸರು ಹೊಡೆದೋಡಿಸುತ್ತಾರೆ. ಹಸಿವಿನಿಂದ ಬಳಲುವ ಮಕ್ಕಳ ಮುಖ ನೋಡಲಾಗುತ್ತಿಲ್ಲ. ನಾವು ಕೊರೊನಾ ಬಂದು ಸಾಯೋದಕ್ಕೂ ಮುಂಚೆಯೇ ಹಸಿವಿನಿಂದ ನಾವು ಸಾಯೋದು ಖಚಿತ. ನಮಗೆ ಸಾಲದ ರೂಪದಲ್ಲಿ ಹಣ ನೀಡಿದ್ರೆ ದುಡಿದು ತೀರಿಸುತ್ತೇವೆ ಅನ್ನೋದು ಮಂಜುಳ ಅವರ ಮನವಿ.