ಬಳ್ಳಾರಿ: ಜೀವದ ಹಂಗು ತೊರೆದು ಮನೆ - ಮನೆಗೂ ತೆರಳಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಅಮೂಲ್ಯವಾದದ್ದು ಎಂದು ಬಿಜೆಪಿ ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ್ ಹೇಳಿದರು.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮತ್ತು ಇತರ ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕೆ.ನೇಮಿರಾಜ್ ನಾಯ್ಕ್, ಕಡಿಮೆ ಸಂಭಾವನೆ ಪಡೆದರೂ ಹೆಚ್ಚಿನ ಕೆಲಸಗಳು ನಿಮ್ಮಿಂದಾಗಿವೆ. ಮನೆ - ಮಕ್ಕಳ ಸೇವೆ ಬದಿಗಿಟ್ಟು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಮುಂದಿನ ದಿನಗಳಲ್ಲಿ ವಸತಿ ರಹಿತ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ವೇಳೆ, ಬಿಜೆಪಿ ಹಿರಿಯ ಮುಖಂಡರಾದ ಎಂಎಂಜೆ ಸ್ವರೂಪನಾಂದ ವಕೀಲರು, ಎಸ್.ತಿಂದಪ್ಪ, ಕೊಟ್ಟೂರು ಬ್ಲಾಕ್ ಅಧ್ಯಕ್ಷ ವೀರೇಶ್ ಗೌಡ, ಮಂಡಳ ಪ್ರಧಾನ ಕಾರ್ಯದರ್ಶಿ ಡಾ.ರಾಕೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಹೊಸಮನಿ ವಿನಯ್ ಕುಮಾರ್, ಬೋರ್‌ವೆಲ್ ತಿಪ್ಪೇಸ್ವಾಮಿ, ಸಿ.ಎಂ ಕೆಂಗರಾಜ, ಮರಬದ ಕೊಟ್ರೇಶ್, ಹಾಗೂ ಕಾರ್ಯಕರ್ತರಾದ ಕೋನಾಪುರದ ಬಸವರಾಜ್, ಎಂ.ಎಂ.ಜೆ.ವಾಗೀಶ್ ಅಡಕಿ ಮಂಜುನಾಥ, ಜಿ.ಅಶೋಕ್, ಉಮಾಪತಿ ಮಠದ್ ಉಪಸ್ಥಿತರಿದ್ದರು.