ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್​ ಭೀತಿ: ಹಂಪಿಗೆ ಭೇಟಿ‌ ನೀಡುವ ವಿದೇಶಿಯರ ಆರೋಗ್ಯ ತಪಾಸಣೆ! - ಹಂಪಿಗೆ ಭೇಟಿ‌ ನೀಡೋ ವಿದೇಶಿಯರ ಆರೋಗ್ಯ ತಪಾಸಣೆ..!

ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಡಿ.ಭಾಸ್ಕರ್​ ನೇತೃತ್ವದ ತಂಡವು ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತೆರಳಿ ವಿದೇಶಿಯರ ಆರೋಗ್ಯ ವಿಚಾರಿಸಿದ್ದಲ್ಲದೇ ತಪಾಸಣೆ ಕೂಡ ನಡೆಸಿತು.

corona-virus-phobia - in-balari
ಕೊರೊನಾ ವೈರಸ್ ಭೀತಿ

By

Published : Mar 3, 2020, 7:36 PM IST

ಬಳ್ಳಾರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿದೇಶಿಯರನ್ನು ಆಯುರ್ವೇದ ಆಸ್ಪತ್ರೆಯ ವೈದ್ಯರ ತಂಡ ತಪಾಸಣೆಗೆ ಒಳಪಡಿಸಿದೆ.

ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಡಿ.ಭಾಸ್ಕರ್​​ ನೇತೃತ್ವದ ತಂಡವು ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಇನ್ನಿತರ ಕಡೆ ತೆರಳಿ ವಿದೇಶಿಯರ ಆರೋಗ್ಯ ವಿಚಾರಿಸಿದ್ದಲ್ಲದೇ, ತಪಾಸಣೆ ಕೂಡ ನಡೆಸಿತು.

ಬಳಿಕ ಮಾತನಾಡಿದ ಡಾ. ಡಿ.ಭಾಸ್ಕರ್​, ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರತಿಯೊಬ್ಬ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ಪ್ರವಾಸಿಗರ ವಿಳಾಸವನ್ನು ಪಡೆಯಲಾಗುತ್ತಿದೆ. ಕೊರೊನಾ ವೈರಸ್ ಶೀತ, ಕೆಮ್ಮು, ಜ್ವರದ ಮೂಲಕ ಹರಡುತ್ತದೆ. ಕೆಮ್ಮಿಂದಾಗಿ ಹಾಗೂ ಸೀನಿದಾಗ ಕರವಸ್ತ್ರ ಬಳಸಬೇಕು. ಅಲ್ಲದೇ, ಮಾಸ್ಕ್ ಧರಿಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಕರೆ ನೀಡಿದ್ರು.

ಕೊರೊನಾ ವೈರಸ್ ಭೀತಿ

ಈ ವೇಳೆ ಸ್ಥಳೀಯ ವೈದ್ಯರಾದ ವಿನೋದ, ಮೋಹನ್, ರೇಷ್ಮಾ, ಆರೋಗ್ಯ ಸಹಾಯಕ ಹನುಮಂತಪ್ಪ ಇದ್ದರು.

ABOUT THE AUTHOR

...view details