ಬಳ್ಳಾರಿ: ಕೊರೊನಾ ವಾರಿಯರ್ಸ್ಗೂ ಬೆಂಬಿಡದೆ ಕಾಡುತ್ತಿರುವ ಡೆಡ್ಲಿ ವೈರಸ್ ಇದೀಗ ನಗರದ ಪೊಲೀಸ್ ಸಿಬ್ಬಂದಿಗೆ ಕಂಟಕವಾಗಿ ಪರಿಣಮಿಸಿದೆ.
ಜಿಲ್ಲೆಯ ಹೊಸಪೇಟೆ ತಾಲೂಕು ಮತ್ತು ಕಂಪ್ಲಿ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಎಎಸ್ಐ ಮತ್ತು ಕಂಪ್ಲಿ ಠಾಣೆಯ ಸಿಪಿಐಗೆ ಸೋಂಕು ದೃಢವಾಗಿದೆ.
ಕೊರೊನಾ ವಾರಿಯರ್ಸ್ ಬೆನ್ನೇರಿದ ಮಹಾಮಾರಿ: ಬಳ್ಳಾರಿಯ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢ..! - ಬಳ್ಳಾರಿ ಕೊರೊನಾ ಸುದ್ದಿ
ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಎಎಸ್ಐ ಮತ್ತು ಕಂಪ್ಲಿ ಠಾಣೆಯ ಸಿಪಿಐ ಗೆ ಕೊರೊನಾ ಸೋಂಕು ದೃಢವಾಗಿದೆ.

ಬಳ್ಳಾರಿಯ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢ
ಬಳ್ಳಾರಿಯ ಪೊಲೀಸ್ ಠಾಣೆ ಸೀಲ್ಡೌನ್
ಕಂಪ್ಲಿ ಠಾಣೆಯ ಸಿಪಿಐ ಅಲ್ಲಿನ ಅನೇಕ ಹೋಟೆಲ್, ಅಂಗಡಿಗಳು ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಪರಿಣಾಮ ಅಲ್ಲಿನ ಅನೇಕ ಮಂದಿ ವೈರಸ್ ಭಯದಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಕಂಪ್ಲಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದ್ದು, ಸಿಪಿಐ ಮತ್ತು ಎಎಸ್ಐ ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ.