ಬಳ್ಳಾರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಓಮನ್ ದೇಶದಿಂದ ಆಗಮಿಸಿದ ದಂಪತಿಯನ್ನ ಗೃಹ ಬಂಧನದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿರುಗುಪ್ಪ ನಗರ ನಿವಾಸಿಗಳಾದ ಪವನಕುಮಾರ (34) ಮತ್ತು ಅಮಿಷಾ (26) ಎಂಬುವರಿಗೆ ಕೊರೊನಾ ವೈರಸ್ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರಲ್ಲೂ ಯಾವುದೇ ಕೊರೊನಾ ವೈರಸ್ ನ ಸೋಂಕು ಕಂಡುಬಂದಿಲ್ಲ ಎಂದು ಸಿರುಗುಪ್ಪ ತಹಶೀಲ್ದಾರ್ ಸಾಯಿಬಣ್ಣ ಕೂಡಲಗಿ ತಿಳಿಸಿದ್ದಾರೆ.
ಗೃಹಬಂಧನದಲ್ಲಿ ಓಮನ್ ದೇಶದ ದಂಪತಿ ಮಾರ್ಚ್ 14 ರಂದು ಬೆಳಗ್ಗೆ 9.15 ಗಂಟೆಗೆ ಓಮನ್ ದೇಶದಿಂದ ಹೈದರಾಬಾದ್ಗೆ ಮಧ್ಯಾಹ್ನ 1.30ರ ಸುಮಾರಿಗೆ ಬಂದಿಳಿಯುತ್ತಾರೆ. ಹೈದರಾಬಾದಿನಲ್ಲಿರುವ ತಮ್ಮ ಸಹೋದರಿ ಮನೆಗೆ ಹೋಗಿ ನೇರವಾಗಿ ದಿವಾಕರ್ ರೋಡ್ ಲೈನ್ಸ್ ಬಸ್ನಲ್ಲಿ ಸಿರುಗುಪ್ಪ ನಗರಕ್ಕೆ ಆಗಮಿಸುತ್ತಾರೆ. ಅವರು ಬಂದಾಗ, ಮನೆಯಲಿ ತಂದೆ- ತಾಯಿಗಳು ಇರುತ್ತಾರೆ. ಅವರಿಬ್ಬರನ್ನೂ ಕೂಡ ಬಾಗೇವಾಡಿ ಗ್ರಾಮಕ್ಕೆ ಕಳಿಸಿ ಕೊಡುತ್ತಾರೆ. ಆ ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಮಾಹಿತಿ ನೀಡುತ್ತಾರೆ.
ಅವರಿಂದ ನಮಗೆ ಮಾಹಿತಿ ಬಂದ ಕೂಡಲೇ ಅವರ ನಿವಾಸಕ್ಕೆ ಭೇಟಿಕೊಟ್ಟು ಚಿಕಿತ್ಸೆ ನೀಡುವ ಮುಖೇನ ಮುಂದಿನ 14 ದಿನಗಳಕಾಲ ಯಾವುದೇ ರೀತಿಯ ಸಾರ್ವಜನಿಕ ಸಂಪರ್ಕ ಸಾಧಿಸಬಾರದು. ಅಲ್ಲದೇ ಸುರಕ್ಷತೆಯ ಬಗ್ಗೆಯೂ ವಿವರಣೆ ನೀಡಲಾಗಿದೆ. ಸಿರುಗುಪ್ಪ ತಾಲೂಕು ಆಸ್ಪತ್ರೆಯಿಂದಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತೆ. ಸದ್ಯ ಯಾವುದೇ ಕೊರೊನಾ ವೈರಸ್ನ ಸೋಂಕು ಪತ್ತೆಯಾಗಿಲ್ಲ. ಅವರಿಬ್ಬರು ಆರೋಗ್ಯವಾಗಿದ್ದಾರೆ. ರಕ್ತದ ಮಾದರಿಯನ್ನು ಕಲೆಕ್ಟ್ ಮಾಡಲಾಗಿದ್ದು, ಪರೀಕ್ಷೆಗೆ ಕಳಿಸಿ ಕೊಡಲಾಗಿದೆಂದು ತಹಶೀಲ್ದಾರ್ ಕೂಡಲಗಿ ತಿಳಿಸಿದ್ದಾರೆ.