ಹೊಸಪೇಟೆ: ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಕ್ರಮ ಕೈಗೊಂಡಿದ್ದು, ಕೋವಿಡ್-19 ರ್ಯಾಪಿಡ್ ಪರೀಕ್ಷೆ ನಡೆಸಲು ಮುಂದಾಗಿವೆ.
ಹೊಸಪೇಟೆ ಸರ್ಕಾರಿ ನೌಕರರ ಕೊರೊನಾ ಟೆಸ್ಟ್ಗೆ ಪರೀಕ್ಷಾ ಕೇಂದ್ರ ಸ್ಥಾಪನೆ - ಸರಕಾರಿ ನೌಕರರ ಕೊರೊನಾ ಟೆಸ್ಟ್
ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಕ್ರಮ ಕೈಗೊಂಡಿದ್ದು, ಕೋವಿಡ್-19 ರ್ಯಾಪಿಡ್ ಪರೀಕ್ಷೆ ನಡೆಸಲು ಮುಂದಾಗಿವೆ.
ಕೊರೊನಾ ಟೆಸ್ಟ್ಗೆ ಪರೀಕ್ಷಾ ಕೇಂದ್ರ
ನಗರದ ಬಸ್ ಡಿಪೋ ಹಿಂಭಾಗದ ಉಜ್ಜಯಿನಿ ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾರಿ ರಸ್ತೆಯ ಸರ್ದಾರ ಪಟೇಲ್ ಸ್ಮಾರಕ ಪ್ರೌಢ ಶಾಲೆ, ಎಸ್.ಆರ್.ನಗರದ ಬಾಪೂಜಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ತಾಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಗೆ ಕೋವಿಡ್-19 ರ್ಯಾಪಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ತಾಲೂಕಿನ ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಬಂದರೂ ಸಹ ಸರ್ಕಾರಿ ನೌಕಕರು ಭಯ ಪಡಬೇಕಿಲ್ಲ. ಚಿಕಿತ್ಸೆ ಪಡೆದರೆ ಕೊರೊನಾದಿಂದ ಗುಣಮುಖವಾಗಬಹುದು ಎಂದು ತಹಶೀಲ್ದಾರ್ ಹೆಚ್.ವಿಶ್ವನಾಥ್ ಹೇಳಿದ್ದಾರೆ.