ಕರ್ನಾಟಕ

karnataka

ETV Bharat / state

ಹಂಪಿ ಕನ್ನಡ ವಿವಿ ಕುಲಪತಿಗೆ ಕೊರೊನಾ ಸೋಂಕು - Bellary Corona of Hampi Kannada University Chancellor News

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗೆ ಮಹಾಮಾರಿ ಕೊರೊನಾ ಸೋಂಕು ವಕ್ಕರಿಸಿದೆ. ಹೀಗಾಗಿ ವಿವಿ ಆವರಣದಲ್ಲಿರುವ ಅವರ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕು ನಿರೋಧಕ ದ್ರಾವಣ ಸಿಂಪಡಿಸಿದ್ದಾರೆ.

ಹಂಪಿ ಕನ್ನಡ ವಿವಿ ಕುಲಪತಿಗೆ ಕೊರೊನಾ ಸೋಂಕು
ಹಂಪಿ ಕನ್ನಡ ವಿವಿ ಕುಲಪತಿಗೆ ಕೊರೊನಾ ಸೋಂಕು

By

Published : Aug 5, 2020, 10:16 AM IST

ಬಳ್ಳಾರಿ:ಹೊಸಪೇಟೆ ತಾಲೂಕಿನ ಕಮಲಾಪುರ ಹತ್ತಿರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವಿಶ್ವವಿದ್ಯಾಲಯ ಆವರಣದಲ್ಲಿರುವ ಪ್ರೊ. ರಮೇಶ್​ ಅವರ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕು ನಿರೋಧಕ ದ್ರಾವಣ ಸಿಂಪಡಿಸಿದ್ದಾರೆ.

ಸೋಮವಾರದಿಂದ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿಗೆ ಐದು ದಿನಗಳ ರಜೆಯನ್ನು ಘೋಷಣೆ ಮಾಡಲಾಗಿತ್ತು. ರಮೇಶ್ ಅವರು ಆಗಸ್ಟ್ 1 ರಂದು ರ‍್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ಬಂದಿತ್ತು.

ಗಂಟಲು ದ್ರವ ಪರೀಕ್ಷೆಯಿಂದ ಕೋವಿಡ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details