ಕರ್ನಾಟಕ

karnataka

ETV Bharat / state

ಪೊಲೀಸ್ ಕಾನ್​​ಸ್ಟೇಬಲ್​​ಗೆ ತಗುಲಿದ ಸೋಂಕು: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ - corona news

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್​​​ ಒಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಇವರು ನಿನ್ನೆ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದರಿಂದ, ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ.

ಅರಸೀಕೆರೆ ಪೊಲೀಸ್ ಠಾಣೆ
ಅರಸೀಕೆರೆ ಪೊಲೀಸ್ ಠಾಣೆ

By

Published : Jun 26, 2020, 8:59 PM IST

ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್​​​ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಅವರು ನಿನ್ನೆ ಉಚ್ಚಂಗಿದುರ್ಗ ಸರ್ಕಾರಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಲ್ಲಿನ ಕಂಟೈನ್​ಮೆಂಟ್ ಝೋನ್​ನಲ್ಲಿ ಕರ್ತವ್ಯ ನಿರ್ವಹಿಸಿದ, ಕಾನ್​​ಸ್ಟೇಬಲ್ ಗಂಟಲು ದ್ರವ್ಯವನ್ನ ಸಂಗ್ರಹಿಸಿ ಕೋವಿಡ್ ಟೆಸ್ಟ್​​ಗೆ ಕಳುಹಿಸಿಕೊಡಲಾಗಿತ್ತು. ವರದಿ‌ ಬರೋದು ತಡವಾಗಿದ್ದರಿಂದ ಅವರಿಗೆ ನೇರವಾಗಿ ಹರಪನಹಳ್ಳಿ ತಾಲೂಕಿನ ಅರಸೀಕೆರೆಯ ಪೊಲೀಸ್ ಠಾಣೆಗೆ ತೆರಳಿ, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಯು ಸೂಚಿಸಿದೆ. ಅಲ್ಲಿಂದ ಅವರನ್ನ ಉಚ್ಚಂಗಿ ದುರ್ಗದ ಉತ್ಸವಾಂಬ ಪ್ರೌಢಶಾಲೆಯಲ್ಲಿ ನಿನ್ನೆಯ ದಿನದ ನಡೆದ ಎಸ್​​ಎಸ್​ಎಲ್​ಸಿ ಪರೀಕ್ಷೆಯ ಬಂದೋಬಸ್ತ್​ಗೆ ಕಳಿಸಲಾಗಿತ್ತು.

ಅರಸೀಕೆರೆ ಪೊಲೀಸ್ ಠಾಣೆ ಸೀಲ್​ಡೌನ್​

ಹೀಗಾಗಿ, ಅರಸೀಕೆರೆಯ ಪೊಲೀಸ್ ಠಾಣೆ ಹಾಗೂ ಉಚ್ಚಂಗಿ ದುರ್ಗ ಗ್ರಾಮದ ಉತ್ಸವಾಂಬ ಪ್ರೌಢಶಾಲೆಯನ್ನ ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಇವರು ಬೀಟ್ ಸಹ ಹೋಗಿದ್ದರು. ತೋರಣಗಲ್ಲಿಂದ ಜೂ. 22ರಂದು ಅರಸಿಕೇರಿಗೆ ಬಂದಿದ್ದಾರೆ. 23ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. 24ರಂದು ಪೋತಲಕಟ್ಟಿ, ಚಿಕ್ಕಮೇಗಳಗೇರಿ, ಗುಳೇದಹಟ್ಟಿ, ಗ್ರಾಮಗಳಲ್ಲಿ ಗ್ರಾಮ ಗಸ್ತು (ಬೀಟ್‌ ) ಡ್ಯೂಟಿ ಮಾಡಿ ಮರಳಿ ವಾಪಸ್‌ ಅರಸಿಕೇರೆಯ ತಮ್ಮ ಕ್ವಾಟರ್ಸ್‌ಗೆ ಮರಳಿದ್ದಾರೆ. ಜೂ.25ರಂದು ಉಚ್ಚಂಗಿದುರ್ಗ ಗ್ರಾಮದ ಉತ್ಸ​ವಾಂಬ ಪ್ರೌಢ​ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಡ್ಯೂಟಿ ಮಾಡಿದ್ದಾರೆ. ಅರಸಿಕೇರಿಯ ಪೊಲೀಸ್‌ ಠಾಣೆಗೆ ತೆರಳಿ ಅಲ್ಲಿ ಬೀಟ್‌ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೋರಣಗಲ್‌ ಕಂಟೈನ್ಮೆಂಟ್​​ ಝೋನ್​ನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಪೇದೆಗೆ ಪಾಸಿಟಿವ್‌ ಬಂದಿರೋದು ಖಚಿತವಾಗಿದೆ. ಆದರೆ, ಪರೀಕ್ಷೆಗೆ ಮುನ್ನ ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ ಎಂದು ಎಸ್​ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ABOUT THE AUTHOR

...view details