ಬಳ್ಳಾರಿ: ನಾಳೆ ಇಲ್ಲಿನ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಆದರೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ನಾಳೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ : ಎಲೆಕ್ಷನ್ ಡ್ಯೂಟಿಗೆ ನಿಯೋಜನೆಗೊಂಡಿರುವ 14 ಮಂದಿಗೆ ಕೊರೊನಾ
ಬಳ್ಳಾರಿ ಮಹಾನಗರ ಪಾಲಿಕೆಗೆ ನಾಳೆ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ನೇಮಿಸಿರುವ 14 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಇತರರಿಗೂ ಆತಂಕ ಶುರುವಾಗಿದೆ.
ಎಲೆಕ್ಷನ್ ಡ್ಯೂಟಿಗೆ ನೇಮಕವಾಗಿರುವ 14 ಮಂದಿಗೆ ಕೊರೊನಾ
14 ಜನ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಮೊದಲು ಥರ್ಮಾ ಮೀಟರ್ ಚೆಕ್ ಮಾಡಲಾಗುತ್ತಿದ್ದು, ಸ್ವಲ್ಪ ಅನುಮಾನ ಬಂದ್ರೂ ಸಹ ಕೊರೊನಾ ಟೆಸ್ಟ್ಗೆ ಶಿಫಾರಸು ಮಾಡಲಾಗುತ್ತಿದೆ.
ಈ ವೇಳೆ 14 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಮೇ 14ರ ವರೆಗೆ ಕಠಿಣ ಕ್ರಮಕ್ಕೆ ಮುಂದಾಗಿದೆ.