ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 1,558 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 28 ಮಂದಿ ಮೃತಪಟ್ಟಿದ್ದಾರೆ.
ಈವರೆಗೆ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 64,946 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 962 ತಲಿಪಿದೆ.
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 1,558 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 28 ಮಂದಿ ಮೃತಪಟ್ಟಿದ್ದಾರೆ.
ಈವರೆಗೆ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 64,946 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 962 ತಲಿಪಿದೆ.
ನಿನ್ನೆ 744 ಜನ ಕೋವಿಡ್ನಿಂದ ಗುಣಮುಖರಾಗಿದ್ದು, ಇದುವರೆಗೆ 48,351 ಜನರು ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 15,633 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ ಬಳ್ಳಾರಿ- 514 , ಸಂಡೂರು- 131, ಸಿರುಗುಪ್ಪ- 96, ಹೊಸಪೇಟೆ- 384, ಎಚ್.ಬಿ.ಹಳ್ಳಿ- 37, ಕೂಡ್ಲಿಗಿ - 182, ಹರಪನಹಳ್ಳಿ- 100, ಹಡಗಲಿ- 101 ಮತ್ತು ಹೊರ ರಾಜ್ಯದ ನಾಲ್ವರು ಮತ್ತು ಹೊರ ಜಿಲ್ಲೆಯ 9 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.