ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಸಾಕು ಪ್ರಾಣಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುತ್ತಿರುವ ಪ್ರಾಣಿ ಪ್ರಿಯರು - ಕೊರೊನಾ ಭೀತಿ ಹಿನ್ನೆಲೆ

ಬಳ್ಳಾರಿಯಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಚಿಕಿತ್ಸಾ ಘಟಕಕ್ಕೆ ಮುಂಜಾಗ್ರತಾ ಕ್ರಮವಾಗಿ ಜನರು ತಾವು ಸಾಕಿದ ಪ್ರಾಣಿಗಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುತ್ತಿದ್ದಾರೆ.

Animal lovers who gave treatment to their pets
ಸಾಕು ಪ್ರಾಣಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುತ್ತಿರುವ ಪ್ರಾಣಿ ಪ್ರಿಯರು

By

Published : Apr 24, 2020, 11:15 AM IST

ಬಳ್ಳಾರಿ:ಲಾಕ್​ಡೌನ್ ಆದಾಗಿನಿಂದ ನಗರದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಚಿಕಿತ್ಸಾ ಘಟಕಕ್ಕೆ 30ಕ್ಕೂ ಅಧಿಕ ಪ್ರಾಣಿಗಳಿಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಾರೆ ಎಂದು ಡಿ ಗ್ರೂಪ್​ ನೌಕರರು ತಿಳಿಸಿದರು.

ಸಾಕು ಪ್ರಾಣಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುತ್ತಿರುವ ಪ್ರಾಣಿ ಪ್ರಿಯರು

ಕೊರೊನಾ ಭೀತಿ ಕೇವಲ ಜನರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಇದೆ. ಸಾಕಿದಂತಹ ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಜನರು ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಚಿಕಿತ್ಸೆಗಾಗಿ ನಗರದಲ್ಲಿ ಪಶು ಆಸ್ಪತ್ರೆ ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ದಿನದಲ್ಲಿ ಸುಮಾರು 30ಕ್ಕೂ ಅಧಿಕ ಪ್ರಾಣಿಗಳು ಚಿಕಿತ್ಸೆಗಾಗಿ ಇಲ್ಲಿದೆ ಬರುತ್ತಿದ್ದಾರೆ ಎಂದು ಘಟಕಾದ ನೌಕಕರು ತಿಳಿಸಿದರು.

ಸಿಬ್ಬಂದಿ ಕೊರತೆ:

ಸರ್ಕಾರದ ಕಡೆಯಿಂದ ಅಧಿಕೃತವಾಗಿ ವೈದ್ಯರ ನೇಮಕಾತಿ ಇಲ್ಲದ ಪರಿಣಾಮ ಅಗತ್ಯ ಸೌಲಭ್ಯಗಳ ಕೊರತೆಯಿದೆ. ತಮ್ಮ ಪ್ರಾಣಿಗಳನ್ನು ಕರೆದುಕೊಂಡು ಬರುವ ಜನರೇ ಅಗತ್ಯವಿರುವ ಔಷಧಗಳನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.

ABOUT THE AUTHOR

...view details