ಬಳ್ಳಾರಿ : ಗಣಿನಾಡಿನಲ್ಲಿ ಈವರೆಗೂ 1,343 ಸೋಂಕಿತರು ಪತ್ತೆಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ - ಬಳ್ಳಾರಿ ಕೊರೊನಾ ಸುದ್ದಿ
ಜಿಲ್ಲೆಯಲ್ಲಿ ಈವರೆಗೆ 1,343 ಕೇಸ್‌ಗಳು ಪತ್ತೆಯಾಗಿದ್ದು, ಜಿಂದಾಲ್ ಕಂಪನಿಯೊಂದರಲ್ಲಿಯೇ 479 ಮಂದಿಗೆ ಸೋಂಕು ತಗುಲಿದೆ. ಈವರೆಗೆ 36 ಮಂದಿ ಸಾವನ್ನಪ್ಪಿದ್ದಾರೆ.
ಹೆಚ್ಚುತ್ತಿರುವ ಕೊರೊನಾ
ಸೋಮವಾರ 71 ಪಾಸಿಟಿವ್ ಕೇಸ್‌ಗಳು ಬೆಳಕಿಗೆ ಬಂದಿವೆ. ಈವರೆಗೆ 580 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 727 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಪತ್ತೆಯಾದ ಸೋಂಕಿತರಲ್ಲಿ ಅಂದಾಜು 11 (ಐಎಲ್‌ಐ) ಹಾಗೂ ಒಂದು ಸಾರಿ ಪ್ರಕರಣವಿದೆ.