ಕರ್ನಾಟಕ

karnataka

ETV Bharat / state

ಮಾಸ್ಕ್​​​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಿರಿ : ಯುವಕರ ಜಾಗೃತಿ - ballari latest news

ಕೊರೊನಾ ವೈರಸ್ ಮುಂಜಾಗ್ರತೆ ದೃಷ್ಟಿಯಿಂದ ನಗರದ ಶ್ರವಣ ಹಿಯರಿಂಗ್ ಏಡ್ ಸೆಂಟರ್​ನ ಆರು ಯುವಕರ ತಂಡ ಸಾರ್ವಜನಿಕರಿಗೆ ಮಾಸ್ಕ್ ಹಾಕುವ ಬಗ್ಗೆ ಜಾಗೃತಿ ಮತ್ತು ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಸಿದರು.

corona awareness
ಯುವಕರಿಂದ ಕೊರೊನಾ ಜಾಗೃತಿ

By

Published : Jun 19, 2020, 1:50 PM IST

ಬಳ್ಳಾರಿ:ಮಾಸ್ಕ್​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಬೇಡಿ ಮತ್ತು ಬಳಸಿದ ಮಾಸ್ಕ್​ಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಎಂದು ಶ್ರವಣ ಹಿಯರಿಂಗ್ ಏಡ್ ಸೆಂಟರ್​ನ ಯುವಕರು ವಾಯು ವಿಹಾರಕ್ಕೆ ಬಂದ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಕೊರೊನಾ ವೈರಸ್ ಮುಂಜಾಗ್ರತೆಯ ದೃಷ್ಟಿಯಿಂದ ನಗರದ ಶ್ರವಣ ಹಿಯರಿಂಗ್ ಏಡ್ ಸೆಂಟರ್​ನ ಆರು ಯುವಕರ ತಂಡ ಸಾರ್ವಜನಿಕರಿಗೆ ಮಾಸ್ಕ್ ಹಾಕುವ ಬಗ್ಗೆ ಜಾಗೃತಿ ಮತ್ತು ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಸಿದರು.

ಯುವಕರಿಂದ ಕೊರೊನಾ ಜಾಗೃತಿ

ನಗರದ ಮೋಕ ರಸ್ತೆಯಲ್ಲಿ ವಾಯು ವಿಹಾರಕ್ಕೆ ಬಂದ ಸಾರ್ವಜನಿಕರಿಗೆ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿ, ಹಾಗೇ ಉಚಿತ ಮಾಸ್ಕ್ ವಿತರಣೆ ಮಾಡಿದರು. ಮನೆಯಿಂದ ಹೊರಗಡೆ ಬಂದರೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ಹಾಕಬೇಕು, ಬಟ್ಟೆಯಿಂದ ತಯಾರಿಸಿದ ಮಾಸ್ಕ್​​ಗಳನ್ನು ಬಿಸಿ ನೀರಿಗೆ ಹಾಕಿ ಮರು ಬಳಕೆ ಮಾಡಬಹುದು ಎಂದು ತಿಳಿಸಿದರು.

ABOUT THE AUTHOR

...view details