ಬಳ್ಳಾರಿ:ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಾಕ್ಷ್ಯ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ.
ಬಳ್ಳಾರಿ ಪೊಲೀಸರಿಂದ ಕೊರೊನಾ ಜಾಗೃತಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ - ಬಳ್ಳಾರಿ ಪೊಲೀಸರಿಂದ ಕೊರೊನಾ ಜಾಗೃತಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ
ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿ ಜಿಲ್ಲಾ ಪೊಲೀಸರು ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದು, ಜಿಲ್ಲಾ ಎಸ್ಪಿ ಸಿ.ಕೆ ಬಾಬಾ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ
ನಗರದ ಎಸ್.ಪಿ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು. ಹೊಸಪೇಟೆಯ ಯುವಕರ ತಂಡ, ಪೊಲೀಸ್ ಇಲಾಖೆ ಮತ್ತು ಮಾಧ್ಯಮ ಪ್ರತಿನಿಧಿಗಳು ಒಟ್ಟಾಗಿ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ
ಚಿತ್ರದಲ್ಲಿ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಮುಖ್ಯಪೇದೆ ಎಸ್.ಕೆ ಜಿಲಾನಿ ಬಾಷ, ಪತ್ರಿಕಾ ಛಾಯಾಗ್ರಾಹಕ ಮತ್ತು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ನಟಿಸಿದ್ದು, ತಾಂತ್ರಿಕವಾಗಿ ಹೊಸಪೇಟೆಯ ಯುವಕರಾದ ಮಹಿನ್ ಜೈನ್ ,ಸೂರಜ್ ಸೋನಿ, ಮಹಿನ್ ಜೈನ್, ತರುಣ್ ಜೈನ್ಕ್ ಕಾರ್ಯನಿರ್ವಹಿಸಿದ್ದಾರೆ.
TAGGED:
orona Awareness Documentary