ಬಳ್ಳಾರಿ: ಬಳ್ಳಾರಿಯಲ್ಲಿ ನಿನ್ನೆ ಸಂಜೆಯಿಂದ ಮೋಡ ಕವಿದ ವಾತಾವರಣವಿದೆ. ಇಂದು ಬೆಳಿಗ್ಗೆ ಆರು ಗಂಟೆಯಿಂದಲೇ ಬಿಡದೆ ಒಂದೂವರೆ ಗಂಟೆ ಜಿಟಿ-ಜಿಟಿ ಮಳೆಯಾಗಿದೆ.
ಬಳ್ಳಾರಿಯಲ್ಲಿ ಮೋಡ ಕವಿದ ವಾತಾವರಣ.. ಒಂದೂವರೆ ಗಂಟೆ ಜಿಟಿ-ಜಿಟಿ ಮಳೆ.. - continues rain bellary
ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಳೆಯಾಗಿದೆ. ಇವತ್ತು ಬೆಳಗ್ಗೆ ಒಂದೂವರೆ ಗಂಟೆ ಬಿಡದೆ ಜಿಟಿ-ಜಿಟಿ ಮಳೆಯಾಗಿದೆ. ಬಿಸಿಲಿನ ಬದಲಾಗಿ ನಗರದಲ್ಲಿ ಮೋಡ ಕವಿದ ವಾತಾವರಣವಿದೆ.

ಜಿಟಿ-ಜಿಟಿ ಮಳೆ
ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ರೈಲ್ವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಉಂಟಾಯಿತು. ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೌಲ್ ಬಜಾರ್, ಸತ್ಯನಾರಾಯಣ ಪೇಟೆಗಳಲ್ಲಿ ನೀರು ತುಂಬಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.
ಒಂದೂವರೆ ಗಂಟೆ ಜಿಟಿ-ಜಿಟಿ ಮಳೆ..
ನಗರದಲ್ಲಿ ಮಳೆಯಿಲ್ಲದೆ ಎಂದು ಮೂಲೆ ಸೇರಿಸಿದ್ದ ಕ್ಯಾಪ್, ಜರ್ಕೀನ್, ಛತ್ರಿಗಳು ಹೊರಗಡೆ ಬಂದಿದ್ದವು. ಕೆಲವರು ಮಳೆಯಲ್ಲಿಯೇ ನೆನೆದು ತಮ್ಮ ಮನೆಗಳಿಗೆ, ಊರುಗಳಿಗೆ ಪ್ರಯಾಣ ಬೆಳೆಸಿದರು.