ಹೊಸಪೇಟೆ:ಕಂಪ್ಲಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಕಂಟಕವಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.
ಕಂಪ್ಲಿ ತಾಲೂಕಿನಲ್ಲಿ ಸತತ ಮಳೆಗೆ ಬೆಳೆ ಹಾನಿ : ಚಿಂತೆಗೀಡಾದ ರೈತರು - Heavy rain Kampli taluk
ಕಂಪ್ಲಿ ತಾಲೂಕಿನಲ್ಲಿ ಮಳೆಯಾಗುತ್ತಿದೆ. ಇದರಿಂದ ಬೆಳೆದ ಬೆಳೆಗಳೆಲ್ಲ ಹಾಳಾಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.
![ಕಂಪ್ಲಿ ತಾಲೂಕಿನಲ್ಲಿ ಸತತ ಮಳೆಗೆ ಬೆಳೆ ಹಾನಿ : ಚಿಂತೆಗೀಡಾದ ರೈತರು Kampli](https://etvbharatimages.akamaized.net/etvbharat/prod-images/768-512-02:46:32:1601543792-kn-hpt-02-kampli-crop-damage-to-continupus-rainfall-vsl-ka10031-01102020141700-0110f-1601542020-549.jpg)
Kampli
ಕಂಪ್ಲಿ ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 401 ಎಂಎಂ ನಷ್ಟು ಮಳೆಯಾಗಿತ್ತು. ಇಂದು ಸುಮಾರು 27 ಎಂಎಂ ಮಳೆಯಾಗಿದೆ. ಬಿಟ್ಟು ಬಿಡದೇ ಸುರಿತ್ತಿರುವ ಮಳೆಯು ರೈತರಿಗೆ ಶಾಪವಾಗಿ ಪರಿಣಮಿಸುತ್ತಿದೆ.
ನಿರಂತರ ಮಳೆಯಿಂದಾಗಿ ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ, ಬಾಳೆ ಬೆಳೆಗಳು ಹಾಳಾಗುತ್ತಿವೆ. ಇನ್ನು ತುಂಗಭದ್ರಾ ನದಿ ಪಾತ್ರದಲ್ಲಿ ಬೆಳೆದಿದ್ದ ಭತ್ತ ಕೊಯ್ಲಿಗೆ ಬಂದಿದ್ದು, ನಂ.10 ಮುದ್ದಾಪುರ ಗ್ರಾಮದಲ್ಲಿ ಮಳೆ ರಭಸಕ್ಕೆ ಭತ್ತ ಬೆಳೆ ನೆಲಕ್ಕೆ ಬಿದ್ದಿದೆ. ಕಾಳುಗಳು ಉದುರುತ್ತಿವೆ. ಇದರಿಂದ ಇಳುವರಿ ಮೇಲೆ ಪರಿಣಾಮ ಬೀರಲಿದ್ದು, ರೈತರು ಕಂಗಾಲಾಗಿದ್ದಾರೆ.