ಕರ್ನಾಟಕ

karnataka

ETV Bharat / state

ಕಂಟೈನ್​​ಮೆಂಟ್​​ ಝೋನ್​​ ಆದ ಬಳ್ಳಾರಿಯ ಕೌಲ್​ ಬಜಾರ್: ಔಷಧಿ ಅಂಗಡಿ ಬಿಟ್ಟು ಎಲ್ಲವೂ ಬಂದ್​​​ - ಬಳ್ಳಾರಿಯಲ್ಲಿ ತೀವ್ರ ನಿಗಾ ಘಟಕ

ಬಳ್ಳಾರಿ ನಗರದ ಕೌಲ್​ ಬಜಾರ್​ನಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದ್ದು, ಆ ಪ್ರದೇಶವನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಲಾಗಿದೆ. ಔಷಧಿ ಅಂಗಡಿ ಬಿಟ್ಟು ಸಂಪೂರ್ಣ ಬಂದ್​​​ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್​ ಹೇಳಿದ್ದಾರೆ.

Containment zone in bellaru koul bazar place
ನಗರದ ಕೌಲ್​ ಬಜಾರ್ ಸಂಪೂರ್ಣ ಕಂಟೈನ್​ಮೆಂಟ್​ ಝೋನ್

By

Published : May 5, 2020, 5:12 PM IST

ಬಳ್ಳಾರಿ: ನಗರದ ಕೌಲ್​ ಬಜಾರ್ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಇಂದು ಬೆಳಿಗ್ಗೆಯಿಂದಲೇ ಈ ಪ್ರದೇಶವನ್ನು ಸಂಪೂರ್ಣವಾಗಿ ಕಂಟೈನ್​ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ನಗರದ ಕೌಲ್​ ಬಜಾರ್ ಸಂಪೂರ್ಣ ಕಂಟೈನ್​ಮೆಂಟ್​ ಝೋನ್

ಉತ್ತರಾಖಂಡ್​ಗೆ ಪ್ರವಾಸಕ್ಕೆ ತೆರಳಿದ್ದ 18 ಜನರಲ್ಲಿ 4 ಕಣೆಕಲ್ ಹಾಗೂ ಉಳಿದ 24 ಜನ ಬಳ್ಳಾರಿಯವರಾಗಿದ್ದಾರೆ. ಇವರೆಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಬ್ಬರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. 13 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದಲೇ ನಗರದ ಕೌಲ್​ ಬಜಾರ್ ಪ್ರದೇಶದ ಹೋಟೆಲ್, ಕಿರಾಣಿ ಅಂಗಡಿಗಳು, ಬ್ಯಾಂಕ್, ಬಾರ್​ಗಳು, ಹಣ್ಣು ಹಾಗೂ ತರಕಾರಿ, ಮೀನು, ಮಾಂಸದ ಅಂಗಡಿಗಳು ಸೇರಿದಂತೆ ಎಲ್ಲವನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದರು.

ನಗರದ ಕೌಲ್​ ಬಜಾರ್ ಸಂಪೂರ್ಣ ಕಂಟೈನ್​ಮೆಂಟ್​ ಝೋನ್

ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಸ್ವಚ್ಛಗೊಳಿಸಿ, ಬ್ಲೀಚಿಂಗ್​ ಪೌಡರ್ ಹಾಕಿದ್ದು, ರಾಸಾಯನಿಕ ಸಿಂಪಡಿಸಲಾಗಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿ ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಗರದ ಕೌಲ್​ ಬಜಾರ್ ಸಂಪೂರ್ಣ ಕಂಟೈನ್​ಮೆಂಟ್​ ಝೋನ್

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ಗಳನ್ನು ಕಡ್ಡಾಯವಾಗಿ ಧರಿಸಬೇಕಿದೆ. ಅನಗತ್ಯ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಟಿ ಬಿಸಿ ಮುಟ್ಟಿಸುತ್ತಿದ್ದಾರೆ. ಕಂಟೈನ್​​ಮೆಂಟ್ ಝೋನ್ ಸ್ಥಳದಲ್ಲಿ ಪೊಲೀಸ್​ ಸಬ್ ಇನ್ಸ್​​ಪೆಕ್ಟರ್ ವಿಜಯಲಕ್ಷ್ಮಿ, ಪೇದೆ ಕೆ.ರಾಮಲಿಂಗ, ಮಹಾನಗರ ಪಾಲಿಕೆ ಹೆಲ್ತ್ ಇನ್ಸ್​​​ಪೆಕ್ಟರ್ ನಾಗೇಂದ್ರ, ಸಿಬ್ಬಂದಿ ಅಂಜಿ ಇದ್ದಾರೆ.

ABOUT THE AUTHOR

...view details