ಹೊಸಪೇಟೆ: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 38 ಎಕೆರೆ ಭೂಮಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಟರ್ಮಿನಲ್ ನಿರ್ಮಿಸುವ ಆಲೋಚನೆ ಇದೆ ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ಡಿ ಎಸ್ ವೀರಯ್ಯ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರೊಂದಿಗೆ ಮಾತಾನಡಿದ ಅವರು,ಈ ಹಿಂದೆ ಟರ್ಮಿನಲ್ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಟೆಂಡರ್ ರದ್ದುಗೊಳಿಸಲಾಗಿತ್ತು.
ಈಗ ಮತ್ತೆ ಟೆಂಡರ್ ಕರೆಯಲಾಗುತ್ತಿದೆ. 45 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣವಾಗಲಿದೆ. 6 ತಿಂಗಳ ಬಳಿಕ ಟರ್ಮಿನಲ್ ಶಂಕು ಸ್ಥಾಪನೆ ನೆರವೇರಲಿದೆ ಎಂದು ಹೇಳಿದರು. ಟ್ರಕ್ ಟರ್ಮಿನಲ್ಗಳು ಈ ದೇಶದಲ್ಲಿ ಅತ್ಯಗತ್ಯವಾಗಿವೆ. ಸುಸಜ್ಜಿತ ಸಂಚಾರಕ್ಕೆ ಟರ್ಮಿನಲ್ಗಳು ಅವಕಾಶ ಕಲ್ಪಿಸಿಕೊಡಲಿವೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಹೊಸಪೇಟೆಯಲ್ಲಿ ಭೂಮಿ ಇದ್ದು, ಟರ್ಮಿನಲ್ ಸ್ಥಾಪನೆ ಮಾಡಬೇಕಾಗಿದೆ ಎಂದು ತಿಳಿಸಿದರು.