ಕರ್ನಾಟಕ

karnataka

ETV Bharat / state

ಟ್ರಬಲ್ ಶೂಟರ್​​ ಇಡಿ ಬಲೆಯಿಂದ ಮುಕ್ತರಾಗಲು ಕಾಂಗ್ರೆಸ್​ ಕಾರ್ಯಕರ್ತೆಯರಿಂದ ತೆಂಗಿನಕಾಯಿ ಹರಕೆ! - ಕನಕದುರ್ಗಮ್ಮ ದೇಗುಲ

ತೆಂಗಿನಕಾಯಿ ಒಡೆಯೋ ಮುಖೇನ ಟ್ರಬಲ್ ಶೂಟರ್, ಡಿ.ಕೆ.ಶಿವಕುಮಾರ್​ ಅವರು ಆದಷ್ಟು ಬೇಗನೆ ಬೆಂಗಳೂರಿಗೆ ವಾಪಾಸ್ ಆಗಲಿ ಎಂದು, ಬಳ್ಳಾರಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೆಂಗಿನಕಾಯಿ ಹರಕೆ ತೀರಿಸಿದರು.

ತೆಂಗಿನಕಾಯಿ ಹರಕೆ

By

Published : Sep 3, 2019, 1:42 PM IST

ಬಳ್ಳಾರಿ:ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಅನಗತ್ಯವಾಗಿ ಜಾರಿ ನಿರ್ದೇಶನಾಲಯವು (ಇಡಿ) ನೀಡುತ್ತಿರುವ ಕಿರುಕುಳದಿಂದ ಬಹುಬೇಗನೆ ಮುಕ್ತರಾಗಬೇಕೆಂದು, ಗಣಿನಗರಿ ಬಳ್ಳಾರಿಯ ಕನಕದುರ್ಗಮ್ಮ ದೇಗುಲದಲ್ಲಿಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೆಂಗಿನಕಾಯಿ ಹರಕೆ ತೀರಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಟಿ.ಪದ್ಮಾ ಹಾಗೂ ಹಿರಿಯ ಕಾಂಗ್ರೆಸ್ ಸದಸ್ಯೆ ಜಿ.ಕಮಲಾ ಮರಿಸ್ವಾಮಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ಜಮಾಯಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಅಂದಾಜು ನೂರೊಂದು ತೆಂಗಿನಕಾಯಿ ಒಡೆಯೋ ಮುಖೇನ ಟ್ರಬಲ್ ಶೂಟರ್, ಡಿ.ಕೆ.ಶಿವಕುಮಾರ್​ ಅವರು ಆದಷ್ಟು ಬೇಗನೆ ಬೆಂಗಳೂರಿಗೆ ವಾಪಾಸ್ ಆಗಲಿ ಎಂದು ಕನಕದುರ್ಗಮ್ಮ ದೇವಿಯಲ್ಲಿ ಪ್ರಾರ್ಥಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ತೆಂಗಿನಕಾಯಿ ಹರಕೆ

ಹಿರಿಯ ಕಾಂಗ್ರೆಸ್ ಸದಸ್ಯೆ ಕಮಲಾ ಮರಿಸ್ವಾಮಿ ಮಾತನಾಡಿ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಸಂಸ್ಥೆಯಿಂದ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಮುಖ ರೂವಾರಿಗಳಾದ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರೇ ಪ್ರಮುಖ ಕಾರಣರಾಗಿದ್ದಾರೆ. ಈ ಉಭಯ ನಾಯಕರು ಹಳೆಯ ದ್ವೇಷವನ್ನು ಸಾಧಿಸುತ್ತಿದ್ದಾರೆ.‌ ಗುಜರಾತ್ ಶಾಸಕರನ್ನ ಕೂಡಿ ಹಾಕುವಲ್ಲಿ ಯಶಸ್ವಿ ಆಗಿದ್ದ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಹಗೆತನ ಸಾಧಿಸಿದ್ದಾರೆ. ಅವರೊಬ್ಬ ಬಂಡೆ ಇದ್ದಂತೆ.‌ ಇಂತಹ ನೂರು ಮಂದಿ ಮೋದಿ, ಅಮಿತ್ ಷಾ ಅವರು ಬಂದ್ರೂ ಏನೂ ಮಾಡಲಿಕ್ಕಾಗಲ್ಲ ಎಂದು ಕುಟುಕಿದರು.

ABOUT THE AUTHOR

...view details