ಹೊಸಪೇಟೆ : ಕ್ಷೇತ್ರದಿಂದ ಸ್ಥಳೀಯ ನಾಯಕ ಹೆಚ್.ಎಂ ಮೊಹಮ್ಮದ್ ಇಮಾಮ್ ನಿಯಾಜ್ ಹುಸೇನ್ ಅವರಿಗೆ ಟಿಕೆಟ್ ನೀಡದೆ, ವೆಂಕಟರಾವ್ ಘೋರ್ಪಡೆ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸ್ಥಳೀಯ ಕಾರ್ಯಕರ್ತರಿಗೆ ಕಾಂಗ್ರೆಸ್ ಅನ್ಯಾಯ ಆರೋಪ, ಭುಗಿಲೆದ್ದ ಆಕ್ರೋಶ - hoskote congress workers protest
ಸ್ಥಳೀಯ ನಾಯಕ ಹೆಚ್.ಎಂ. ಮೊಹಮ್ಮದ್ ಇಮಾಮ್ ನಿಯಾಜ್ ಹುಸೇನ್ ಅವರಿಗೆ ಟಿಕೆಟ್ ನೀಡದೆ ವೆಂಕಟರಾವ್ ಘೋರ್ಪಡೆ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಸ್ಥಳೀಯವಾಗಿ ಪಕ್ಷಕ್ಕೆ ಕೆಲಸ ಮಾಡಿದವರನ್ನು ಬಿಟ್ಟು, ಪರಿಚಯ ಇಲ್ಲದ ವೆಂಕಟರಾವ್ ಘೋರ್ಪಡೆಗೆ ಟಿಕೆಟ್ ನೀಡಲಾಗಿದೆ. ಇದು ಸರಿಯಲ್ಲ, ಹೀಗಾಗಿ ನಿರ್ಧಾರ ಬದಲಾಗದೇ ಹೋದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಸಿದ್ದಾರೆ.
ಹೆಚ್. ಎಂ.ಮೊಹಮ್ಮದ್ ಇಮಾಮ ನಿಯಾಜ್ ಅವರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಟಿಕೆಟ್ ನೀಡದಿರುವುದು ಕಾರ್ಯಕರ್ತರ ಕೋಪತಾಪಕ್ಕೆ ಕಾರಣ. ಇನ್ನು ನಿನ್ನೆ ಬಿಜೆಪಿಯಲ್ಲೂ ಕೂಡ ಕಾರ್ಯಕರ್ತರು ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದರು.