ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಕೆಪಿಸಿಸಿ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಸದಸ್ಯ ಜೆ.ಎಸ್.ಆಂಜನೇಯಲು ಮತ್ತು ಪತ್ನಿ ಜೆ.ಪುಷ್ಪವತಿ ಬಳ್ಳಾರಿಯ ಡಾ. ರಾಜ್ ರಸ್ತೆಯಲ್ಲಿರುವ ವಂದನಾ ಪ್ರಾಥಮಿಕ ಶಾಲೆಯ 135ನೇ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.
ಬಳ್ಳಾರಿಯ ಬಾಲಭಾರತಿ ಶಾಲೆಯ ಮತಗಟ್ಟೆಯೊಂದರಲ್ಲಿ ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ತಮ್ಮ ಹಕ್ಕನ್ನು ಚಲಾಯಿಸಿದ್ರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಚಾನಾಳ್ ಶೇಖರ ಕೂಡ ಮತದಾನ ಮಾಡಿದರು.