ಹೊಸಪೇಟೆ: ನಗರದಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ವೆಂಕಟರಾವ್ ಘೋರ್ಪಡೆ ನಾಮಪತ್ರ ಸಲ್ಲಿಸಿದರು.
ಹೊಸಪೇಟೆಯಲ್ಲಿ ಕೈ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ನಾಮಪತ್ರ ಸಲ್ಲಿಕೆ - Venkatarao Ghorpade submitting nomination in hospete
ಹೊಸಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಇಂದು ನಾಮಪತ್ರ ಸಲ್ಲಿಸಿದರು.
ಹೊಸಪೇಟೆ ಉಪಚುನಾವಣೆ: ವೆಂಕಟರಾವ್ ಘೋರ್ಪಡೆ ನಾಮ ಪತ್ರ ಸಲ್ಲಿಕೆ
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಎಲ್ಲ ಕಾರ್ಯಕರ್ತರು ನಮಗೆ ಮತದಾನ ಮಾಡಲಿದ್ದು, ವೆಂಕಟರಾವ್ ಘೋರ್ಪಡೆ ಅವರು ಬಹುಮತದಿಂದ ಚುನಾಯಿತರಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ವೆಂಕಟರಾವ್ ಘೋರ್ಪಡೆ ಅವರು ಜನಸಾಮಾನ್ಯರ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿದ್ದಾರೆ. ಜಿಲ್ಲೆಗೆ ಅವರು ಅಪಾರ ಕೊಡುಗೆ ನೀಡಿದ್ದು, ಸರಳ ಜೀವನ ನಡೆಸುವಂತ ವ್ಯಕ್ತಿಗಳಾಗಿದ್ದಾರೆ. ಅವರು ರಾಜ ಮನೆತನದಿಂದ ಬಂದವರು. ಈ ಎಲ್ಲಾ ಸಾಮಾಜಿಕ ಕಳಕಳಿಯನ್ನು ಹೊಂದಿರುವುದರಿಂದ ಜನ ಅವರನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದರು.