ಬಳ್ಳಾರಿ:ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವ್ರು ಇಂದು ಇಲ್ಲಿಯ ಗಾಂಧಿನಗರದಲ್ಲಿ ಪ್ರಚಾರ ನಡೆಸಿದ್ರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪ್ರಚಾರ.. ಜಿಲ್ಲೆಯ ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದ ಬಳಿಯಿಂದು ಸಂವಿಧಾನ ದಿನಾಚರಣೆ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತದಾರರ ಮನೆ ಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಮತಯಾಚನೆ ಮಾಡಿದ್ರು. ಇವರಿಗೆ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪನವ್ರೂ ಕೂಡ ಸಾಥ್ ನೀಡಿದ್ರು.
ಇದಕ್ಕೂ ಮುನ್ನ ವೆಂಕಟರಾವ್ ಘೋರ್ಪಡೆಯವ್ರು ಅವರು ಮಾತನಾಡಿ, ಹೊಸಪೇಟೆ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ನಾಲ್ಕು ತಂಡಗಳಲ್ಲಿ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ವಿಜಯನಗದಲ್ಲಿ ಈ ಬಾರಿ ನಾನೇ ಗೆಲ್ಲುವೆ. ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಉತ್ತಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಜನರಿಗೆ ಕರೆಂಟ್ ಕೊಡಿಸುವಲ್ಲಿಯೂ ಆನಂದ ಸಿಂಗ್ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಡಿಸೆಂವರ್ 28ರಂದು ಮಾಜಿ ಸಿಎಂ ಸಿದ್ದರಾಮಯ್ಯ, 30 ರಂದು ದಿನೇಶ್ಗುಂಡೂರಾವ್ ವಿಜಯನಗರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಜೆ ಎಸ್ ಆಂಜನೇಯಲು ಅವರು ಮಾತನಾಡಿ, ನಿನ್ನೆಯ ದಿನ ಪ್ರಚಾರಕ್ಕೆ ಹೋದಾಗ ಜನರ ಕಷ್ಟ ನೋಡಿ ಬೇಸರವಾಯ್ತು. ಜನರು ಈ ಬಾರಿ ಆನಂದ್ ಸಿಂಗ್‌ರನ್ನ ತಿರಸ್ಕರಿಸಲಿದ್ದಾರೆ ಎಂದ್ರು.