ಬಳ್ಳಾರಿ: ಬಯಲು ರಂಗ ಮಂದಿರಕ್ಕೆ ದಿವಂಗತ ಸುಭದ್ರಮ್ಮ ಮನ್ಸೂರ್ ಹೆಸರಿಡಲು ಶ್ರಮಿಸಿದ ಶಾಸಕ ಸೋಮಶೇಖರ ರೆಡ್ಡಿಗೆ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಹಾಗೂ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಅಭಿನಂದಿಸಿದ್ದಾರೆ.
ರಂಗಮಂದಿರಕ್ಕೆ ಸುಭದ್ರಮ್ಮ ಮನ್ಸೂರ್ ಹೆಸರು : ಸೋಮಶೇಖರ ರೆಡ್ಡಿಗೆ ಅಭಿನಂದನೆ - Department of Kannada and Culture
ಅತ್ಯುತ್ತಮ ನಟಿಯಾಗಿ ಅದ್ವಿತೀಯ ಸೇವೆ ಸಲ್ಲಿಸಿದ್ದ ಸುಭದ್ರಮ್ಮ ಮನ್ಸೂರ್ ಹೆಸರಿಡುವಂತೆ ಜಿಲ್ಲೆಯ ಕಲಾವಿದರ ಮನವಿ ಮೇರೆಗೆ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿತ್ತು..
ಸೋಮಶೇಖರರೆಡ್ಡಿಗೆ ಅಭಿನಂದನೆ
ನಗರದ ಡಾ.ರಾಜ್ ರಸ್ತೆಯಲ್ಲಿರುವ ಬಯಲು ರಂಗ ಮಂದಿರಕ್ಕೆ ಕರ್ನಾಟಕ ರಂಗಭೂಮಿಯಲ್ಲಿ ಗಾಯಕಿ, ಅತ್ಯುತ್ತಮ ನಟಿಯಾಗಿ ಅದ್ವಿತೀಯ ಸೇವೆ ಸಲ್ಲಿಸಿದ್ದ ಸುಭದ್ರಮ್ಮ ಮನ್ಸೂರ್ ಹೆಸರಿಡುವಂತೆ ಜಿಲ್ಲೆಯ ಕಲಾವಿದರ ಮನವಿ ಮೇರೆಗೆ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿತ್ತು.
ಈ ಹಿನ್ನೆಲೆ ಮನವಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮ್ಮತಿ ಸೂಚಿಸಿ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್ ಕೆ ಸುರೇಶ್ ಬಾಬು ಆದೇಶ ಹೊರಡಿಸಿದ್ದಾರೆ.