ಬಳ್ಳಾರಿ: ನೇರವಾಗಿ ಟಿಎ, ಡಿಎ ಹಣವನ್ನು ಕೊಡಿ ಎಂಬುದು ಕ್ರೀಡಾಪಟುಗಳ ಬೇಡಿಕೆಗೆ ಕಿವಿಗೊಡದೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ ಎಂದು ಕ್ರೀಡಾ ಇಲಾಖೆಯ ನಿರ್ದೇಶಕ ಹರಿಸಿಂಗ್ ರಾಥೋಡ ಅವರ ನಿರ್ಧಾರದಿಂದ ಇಬ್ಬರ ನಡುವೆಯು ಮಾತಿನ ಚಕಮಕಿ ಏರ್ಪಟ್ಟಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ದಸಾರ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದ್ದು, ಕ್ರೀಡಾಸಕ್ತರಲ್ಲಿ ಬೇಸರ ಮೂಡಿಸಿದೆ.ಗ್ರಾಮೀಣ ಸೊಗಡು ಬಿಂಬಿಸುವ ಖೋ ಖೋ, ಕಬಡ್ಡಿ ನೋಡಲು ಬಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಸಿದರು. ಕ್ರೀಡಾಕೂಟದ ಕ್ರೀಡಾಪಟುಗಳಿಗೆ ಟಿಎ, ಡಿಎ ಹಣವನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸುವುದು ತಡವಾಗುತ್ತದೆ. ತರಬೇತುದಾರರು ಹಣ ಖರ್ಚು ಮಾಡಿ, ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಬಂದಿರುತ್ತಾರೆ. ಹಾಗಾಗಿ ನೇರವಾಗಿ ಕೊಡಿ ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಹರಿಸಿಂಗ್ ರಾಥೋಡ್ ಅವರಿಗೆ ವಿನಂತಿಸಿದರು.ಇದರಿಂದ ಬರೋಬ್ಬರಿ 2 ಗಂಟೆಗಳ ಕಾಲ ಕ್ರೀಡೆಗಳು ಪ್ರಾರಂಭವಾದವು.
ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಕ್ರಿಯಾ ಯೋಜನೆ ಮತ್ತು ಸಂಘಟನೆಯಿಂದ ದಸರಾ ಕ್ರೀಡಾಕೂಟಕ್ಕೆ ತಾಲೂಕು, ಜಿಲ್ಲಾ ಮತ್ತು ವಿಭಾಗಮಟ್ಟ, ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ₹ 13 ಲಕ್ಷ ಹಣ ಮಂಜೂರು ಮಾಡಲು ಮನವಿ ಸಲ್ಲಿದ್ದೇವೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾದ ಹರಿಸಿಂಗ್ ರಾಥೋಡ ತಿಳಿಸಿದರು.