ವಿಜಯನಗರ:ಕಂಪನಿಯೊಂದು ಗ್ರಾಮದ ಅಭಿವೃದ್ದಿ, ಯುವಕರಿಗೆ ನೌಕರಿ, ಮಾರುಕಟ್ಟೆಗಿಂತ ಮೂರು ಪಟ್ಟು ಹಣ ನೀಡುವುದಾಗಿ ಹೇಳಿ ಅನ್ನದಾತನಿಂದ ಜಮೀನು ಕಿತ್ತುಕೊಂಡಿತ್ತು. ಇದೀಗ 13 ವರ್ಷ ಕಳೆದರೂ ಕಾರ್ಖಾನೆ ಸ್ಥಾಪಿಸಲು ಆ ಕಂಪನಿ ಮುಂದಾಗಿಲ್ಲ. ಆದ್ರೆ ಬೇರೆ ಉದ್ದೇಶಕ್ಕೆ ಜಮೀನು ಬಳಕೆ ಮಾಡಲು ಯೋಚಿಸಿದ್ದು, ಕಂಪನಿ ವಿರುದ್ಧ ಅನ್ನದಾತರು ಹೋರಾಟಕ್ಕೆ ಮುಂದಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ, ನಾರಾಯಣದೇವರ ಕೆರೆ ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ರುಕ್ಮಿಣಿ ರಾಮಾ ಕಾರ್ಖಾನೆಯವರು ರೈತರಿಂದ 90ಕ್ಕೂ ಹೆಚ್ಚು ಎಕರೆ ಜಮೀನನ್ನು ಕನಿಷ್ಠ ಬೆಲೆಗೆ ಖರೀದಿಸಿದ್ದರು. ಜಮೀನು ನೀಡಿದವರಿಗೆ ನೌಕರಿ ಮತ್ತು ಗ್ರಾಮಗಳನ್ನ ಅಭಿವೃದ್ದಿ ಮಾಡುವ ಭರವಸೆ ನೀಡಿದ್ದರು. ಆದ್ರೆ 13 ವರ್ಷ ಕಳೆದರೂ ಇದುವರೆಗೆ ಸ್ಪಾಂಜ್ ಐರನ್ ಫ್ಯಾಕ್ಟರಿ ನಿರ್ಮಾಣ ಮಾಡದೆ, ಮತ್ತೊಂದು ಯೋಜನೆಗೆ ಮುಂದಾಗಿರುವುದು ಜಮೀನು ಕಳೆದುಕೊಂಡ ರೈತರ ಆಕ್ರೋಶಕ್ಕೆ ಕಾರಣವಾಗಿದೆ.