ಸ್ಥಳೀಯರಾದ ಸುಜಾತ ಮಾತನಾಡಿದ್ದಾರೆ ವಿಜಯನಗರ :ಇಲ್ಲಿನ ಜನತಾಪ್ಲಾಟ್ನಲ್ಲಿ ಸ್ಥಳೀಯರು ಹೋಂಸ್ಟೇ, ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳನ್ನು ನಡೆಸಿಕೊಂಡು ಹಂಪಿಯ ವಿರೂಪಾಕ್ಷನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳ, ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದರು. ಆದರೀಗ, ವಿಜಯನಗರ ಜಿಲ್ಲಾಡಳಿತ ನ್ಯಾಯಾಂಗ ನಿಂದನೆ ಕೇಸು ಮುಂದಿಟ್ಟುಕೊಂಡು ಇಲ್ಲಿನ ಎಲ್ಲ ಬಗೆಯ ವ್ಯಾಪಾರ-ವಹಿವಾಟಿಗೆ ಕಡಿವಾಣ ಹಾಕಿದೆ.
''ಸರ್ಕಾರದವರು ತಮ್ಮ ಇಚ್ಛೆಯಂತೆ ಪ್ರಕರಣ ದಾಖಲಿಸಿ ನಮ್ಮನ್ನು ತೊಂದರೆಗೀಡು ಮಾಡಿದ್ದಾರೆ. ಎಲ್ಲ ಅಂಗಡಿಗಳನ್ನೂ ಬಂದ್ ಮಾಡಿದ್ದಾರೆ. ಮಕ್ಕಳಿಗೆ ಶಾಲೆಗೆ ಕಳುಹಿಸಲೂ ಸಹ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಬಿಸ್ಕೆಟ್ ಖರೀದಿಸಲು ನಾವು ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದೇವೆ. ಜನರು ಲೋನ್ ತೀರಿಸಲಾಗದೆ ಮನೆಗಳನ್ನು ಮಾರಿದ್ದಾರೆ. ಯಾವುದೇ ಯೋಜನೆ ತರುವ ಮುನ್ನ ನಮಗೆ ವಾಸಿಸಲು ಅನುವು ಮಾಡಿಕೊಡಿ'' ಎಂದು ಸ್ಥಳೀಯ ನಿವಾಸಿ ವಿರೂಪಾಕ್ಷ ಒತ್ತಾಯಿಸಿದರು.
''ನಾವು ಹಂಪಿಯ ಸ್ಥಳೀಯರು. ಇಲ್ಲಿಗೆ ಬಂದು 45 ವರ್ಷವಾಯ್ತು. ಆಗ ನಮಗೆ ಇಲ್ಲಿ ಫ್ಲಾಟ್ನಲ್ಲಿ ಮನೆ ಕೊಟ್ರು. ಪ್ರಾಧಿಕಾರದವರು ಆಮೇಲೆ ಬಂದಿದ್ದಾರೆ. ಇವರು ಬಂದು ನೀವು ಅನ್ಯಾಯ ಮಾಡುತ್ತಿದ್ದೀರಿ. ಹಂಪಿ ಹಂಗಿದೆ, ಹಿಂಗಿದೆ ಅಂತಿದ್ದಾರೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಹೊರಗೆ ಕಳುಹಿಸಬೇಡಿ. ನಾವು ಪರಸ್ಥಳದವರಿಗೆ ಊಟ ನೀಡಿದ್ದೇವೆ, ಸಹಾಯ ಮಾಡಿದ್ದೇವೆ. ಆದರೆ ಸರ್ಕಾರದವರು ಬಂದು ಬೀಗ ಹಾಕಿದ್ದಾರೆ. ಮೀಟರ್ ಕಿತ್ತುಕೊಂಡು ಹೋಗಿದ್ದಾರೆ. ಮೊಮ್ಮಕ್ಕಳು ಬೀದಿ ದೀಪದ ಕೆಳಗೆ ಕುಳಿತು ಓದುತ್ತಿದ್ದಾರೆ. ದಯವಿಟ್ಟು ನಮಗೆ ಇಲ್ಲಿಯೇ ಇರಲು ಅವಕಾಶ ಮಾಡಿಕೊಡಿ'' ಎಂದು ಸ್ಥಳಿಯರಾದ ಸುಜಾತ ನೋವು ತೋಡಿಕೊಂಡರು.
ಶಾಸಕ ಗವಿಯಪ್ಪ ಅವರು ಮಾತನಾಡಿದ್ದಾರೆ ಶಾಸಕ ಹೆಚ್.ಆರ್.ಗವಿಯಪ್ಪ ಪ್ರತಿಕ್ರಿಯಿಸಿದ್ದು, ''ಇಲ್ಲಿನ ಜನರಿಗೆ ಬದುಕಲು ಬಿಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. 29 ಹಳ್ಳಿಗಳು ಹಾಗೂ ಪಟ್ಟಣ ಪಂಚಾಯತಿಯಲ್ಲಿ ಜನರು ವಾಸಿಸಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ಜನರನ್ನು ನಿಯಂತ್ರಿಸಲು ಬರುವುದಿಲ್ಲ. ಪ್ರಾಧಿಕಾರ ಸ್ಮಾರಕಗಳನ್ನು ರಕ್ಷಿಸಲಿ. ಜನರಿಗೆ ತೊಂದರೆ ಕೊಡುವುದು ಸರಿಯಲ್ಲ'' ಎಂದರು.
ಇದನ್ನೂ ಓದಿ:ಟೆನೆಂಟ್ ಜಮೀನು ಉಳುಮೆ ಮಾಡುತ್ತಿದ್ದ ರೈತರಿಗೆ ಹಸ್ತಾಂತರ.. ಸಚಿವರ ನಿರ್ಧಾರದಿಂದ ಜನರಿಗೆ ಸಂತಸ