ಬಳ್ಳಾರಿ: ಜಿಂದಾಲ್ ನೌಕರರು ಕೊರೊನಾ ವೈರಸ್ನಿಂದ ಗುಣಮುಖರಾಗಿ ಜಿಂದಾಲ್ಗೆ ವಾಪಸ್ ಆದಾಗ ಅವರ ಸಹೋದ್ಯೋಗಿಗಳು ಅವರಿಗೆ ಪುಷ್ಪಗಳನ್ನ ಹಾಕಿ ಮತ್ತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು.
ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ನೌಕರರು ಕೊರೊನಾ ವೈರಸ್ನಿಂದ ಗುಣಮುಖರಾಗಿ ಜಿಂದಾಲ್ನಲ್ಲಿರುವ ನಿವಾಸಕ್ಕೆ ಬರುವ ಸಮಯದಲ್ಲಿ ಕಂಪನಿ ನೌಕರರ ಸಹೋದ್ಯೋಗಿಗಳು ಅವರಿಗೆ ಹೂವುಗಳನ್ನ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು.
ಕೊರೊನಾದಿಂದ ಗುಣಮುಖರಾಗಿ ಬಂದ ಜಿಂದಾಲ್ ನೌಕರರಿಗೆ ಸಹೋದ್ಯೋಗಿಗಳು ಸ್ವಾಗತ ಕೋರಿದರು. ಇನ್ನು ಕೊರೊನಾದಿಂದ ಗುಣಮುಖರಾಗಿ 37 ಜನರು ಬಿಡುಗಡೆಯಾಗಿದ್ದು, ಇದರಲ್ಲಿ ಬಹುತೇಕರು ಜಿಂದಾಲ್ನವರಾಗಿದ್ದಾರೆ. ಇದರಲ್ಲಿ ಜಿಂದಾಲ್ ಸುತ್ತಮುತ್ತಲಿನ ಎಸ್.ಹೆಚ್ ಟೌನ್ಶಿಪ್ 5, ತೋರಣಗಲ್ಲು 2, ವಿವಿ ನಗರ 2, ವಿದ್ಯಾನಗರ 9, ಹೆಚ್.ಎಸ್.ಟಿ 3, ತಾಳೂರು 2, ವಡ್ಡು 2ರ ಜನರಿದ್ದರು.
ಇನ್ನು 319 ಪಾಸಿಟಿವ್ ಕೇಸ್ಗಳಲ್ಲಿ ಇದುವರೆಗೂ 92 ಜನ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನೆಲ್ಲ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಮಾಹಿತಿ ತಿಳಿಸಿದರು.