ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರ ರಚನೆಗೆ ಆನಂದ ಸಿಂಗ್ ಮುಖ್ಯ ಕಾರಣ: ಸಚಿವ ಎಸ್​ ಟಿ ಸೋಮಶೇಖರ್​ - CO-OPERATIVE DEPT MINISTER SOMASHEKAR BYTE NEWS

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲು ರಾಜೀನಾಮೆ ಕೊಟ್ಟಿದ್ದು ಸಚಿವ ಆನಂದ ಸಿಂಗ್‌. ಆ ದಿನಗಳಲ್ಲಿ ಅವರು ಮುಂದೆ ಬಂದು ದಿಟ್ಟತನದಿಂದ ರಾಜೀನಾಮೆ ಕೊಡದಿದ್ದರೆ ಇಂದು ನಾವೆಲ್ಲ ಸಚಿವರಾಗುತ್ತಿರಲಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್​ ಹೇಳಿದ್ದಾರೆ.

ಆನಂದಸಿಂಗ್
ಆನಂದಸಿಂಗ್

By

Published : Jun 19, 2020, 3:38 PM IST

ಬಳ್ಳಾರಿ:ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲು ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮುಖ್ಯ ಕಾರಣವೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್​ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ ಸಿಂಗ್‌. ಆ ದಿನಗಳಲ್ಲಿ ಅವರು ಮುಂದೆ ಬಂದು ದಿಟ್ಟತನದಿಂದ ರಾಜೀನಾಮೆ ಕೊಡದಿದ್ದರೆ ಇಂದು ನಾವೆಲ್ಲ ಸಚಿವರಾಗುತ್ತಿರಲಿಲ್ಲ ಎಂದರು.

ಸಚಿವ ಆನಂದ ಸಿಂಗ್​ ಅವರನ್ನು ಹಾಡಿಹೊಗಳಿದ ಸಚಿವ ಎಸ್.ಟಿ. ಸೋಮಶೇಖರ್​

ನನ್ನ ಕ್ಷೇತ್ರದಲ್ಲಿ ಚಿರತೆ ದಾಳಿಯಾಗಿತ್ತು.‌ ಚಿರತೆ ದಾಳಿಗೆ ಒಳಗಾದ ಕುಟುಂಬಸ್ಥರಿಗೆ ತಕ್ಷಣವೇ ಎರಡೂವರೆ ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದ್ದರು. ಅದು ನನ್ನ ಕಚೇರಿಗೆ ಬಂದಿತ್ತು. ಸ್ವತಃ ನಾನೇ ತೆಗೆದುಕೊಂಡು ಹೋಗಿ ಚಿರತೆ ದಾಳಿಗೆ ಒಳಗಾದ ಕುಟುಂಬಕ್ಕೆ ವಿತರಿಸಿದೆ. ಅಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವುದರಲ್ಲಿ ಸಚಿವ ಆನಂದ ಸಿಂಗ್ ಮುಂದಿರುತ್ತಾರೆ ಎಂದು ಹಾಡಿ ಹೊಗಳಿದರು.

ABOUT THE AUTHOR

...view details