ಕರ್ನಾಟಕ

karnataka

ETV Bharat / state

ಒಮಾನ್​ನಲ್ಲಿ ಶಿವಾಲಯ ರಕ್ಷಣೆಗೆ ಆ ಸರ್ಕಾರ ಮುಂದಾಗಿದೆ, ಇಲ್ಲಿ ಏನಾಗ್ತಿದೆ?: ಇಬ್ರಾಹಿಂ

ಹೊಸಪೇಟೆ ನಗರದಲ್ಲಿ‌ ಅಂಜುಮನ್ ಕಮಿಟಿ ಹಾಗೂ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ನರೇಂದ್ರ ಮೋದಿ ಅವರು 90 ಕೋಟಿ ಜನರನ್ನು ಅಡವಾಗಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

cm-ibrahim-talking-against-to-caa-nrc
ಇಬ್ರಾಹಿಂ

By

Published : Feb 4, 2020, 11:37 AM IST

ಬಳ್ಳಾರಿ: ಒಮಾನ್ ದೇಶದಲ್ಲಿ ಎರಡು ಸಾವಿರ ವರ್ಷ ಇತಿಹಾಸ ಇರುವ ಹಿಂದೂ ಧರ್ಮೀಯರ ಶಿವಾಲಯ ಇದೆ. ಅದರ ರಕ್ಷಣೆಯನ್ನು ಆ ದೇಶದ ಸರ್ಕಾರ ಮಾಡುತ್ತಿದೆ.‌ ಆದ್ರೆ ಭಾರತದಲ್ಲಿ ಹಿಂದೂ - ಮುಸ್ಲಿಂರನ್ನು ಬೇರ್ಪಡಿಸಲು ಪ್ರಧಾನಿ ನರೇಂದ್ರ ಮೋದಿ‌‌ ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.

ಹೊಸಪೇಟೆ ನಗರದಲ್ಲಿ‌ ಅಂಜುಮನ್ ಕಮಿಟಿ ಹಾಗೂ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು 90 ಕೋಟಿ ಜನರನ್ನು ಅಡವಾಗಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ, ವಾಲ್ಮೀಕಿ, ಹಿಂದುಳಿದವರು ಹೊರಗಿನಿಂದ ಬಂದವರು ಎಂದು ಆರ್‌ಎಸ್‌ಎಸ್‌ನ ಬಿ.ಎಲ್.ಸಂತೋಷ್​​ ಹೇಳುತ್ತಿದ್ದಾರೆ. ಆದರೆ, ಈ ಕುರಿತು ಸಚಿವ ಬಿ.ಶ್ರೀರಾಮುಲು ಮಾತನಾಡುತ್ತಿಲ್ಲ. ಅವರಿಗೆ ಕುರ್ಚಿ ಬೇಕಾಗಿದೆ. ಆ ಸಮುದಾಯದವರು ಶ್ರೀರಾಮುಲು ಅವರನ್ನು ಪ್ರಶ್ನೆ ಮಾಡಬೇಕು ಎಂದರು.

ಇಬ್ರಾಹಿಂ, ವಿಧಾನ ಪರಿಷತ್​ ಸದಸ್ಯ

ಕಾರ್ಯಕ್ರಮದಲ್ಲಿ ಯುವ ಮುಖಂಡ ಅಖಿಲ್ ಸಿದ್ದಿಕ್ಕಿ, ಯುವ ನಾಯಕಿ ನಜ್ಮಾ ನಜೀರ್, ಪತ್ರಕರ್ತ ಶಶಿಧರ್ ಭಟ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details