ಕರ್ನಾಟಕ

karnataka

ETV Bharat / state

ಅಭಿಮಾನಿಗಳ ಒತ್ತಾಸೆಯೊಳಗೆ ಬಿ. ಶ್ರೀರಾಮಲು ಡಿಸಿಎಂ ಆಗುವ ಮನದಿಂಗಿತ.. - ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ

ನನಗೆ ಡಿಸಿಎಂ ಹುದ್ದೆ ನೀಡಬೇಕೆಂಬುದು ಅಭಿಮಾನಿಗಳ ಅಭಿಲಾಷೆ. ಅವೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನೇನು ಆ ಬಗ್ಗೆ ಚರ್ಚಿಸುವುದಿಲ್ಲ ಎಂದರು.

Ramulu statement
ರಾಮುಲು ಹೇಳಿಕೆ

By

Published : Jan 25, 2020, 1:20 PM IST

ಬಳ್ಳಾರಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಬಿಎಸ್‌ವೈ ಸಮರ್ಥರಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ‌.ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯ ಅವಂಬಾವಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವಲ್ಲಿ ಸಿಎಂ ಬಿಎಸ್​ವೈ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ನಂಬಿಕೆ ನನಗೆ ಇದೆ. ನನಗೆ ಡಿಸಿಎಂ ಹುದ್ದೆ ನೀಡಬೇಕೆಂಬುದು ಅಭಿಮಾನಿಗಳ ಅಭಿಲಾಷೆ. ಅವೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನೇನು ಆ ಬಗ್ಗೆ ಚರ್ಚಿಸುವುದಿಲ್ಲ ಎಂದರು.

ವಿಜಯನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ಪ್ರಕರಣದ ಬಗ್ಗೆ ಮಾತನಾಡಿ, ಇಂತಹ ಘಟನೆ ನಡೆಯಬಾರದಿತ್ತು. ಈ ಕುರಿತು‌ ತನಿಖೆ ನಡೆಸುವಂತೆ ಈಗಾಗಲೇ ಸೂಚನೆ ನೀಡಿರುವೆ ಎಂದರು.

ಅಭಿಮಾನಿಗಳ ಒತ್ತಾಸೆಯೊಳಗೆ ಬಿ. ಶ್ರೀರಾಮುಲು ಡಿಸಿಎಂ ಆಗುವ ಮನದಿಂಗಿತ..

ಚಿತ್ರದುರ್ಗ ಆಸ್ಪತ್ರೆಯಲ್ಲಿ ಬಾಣಂತಿಯರನ್ನ ನೆಲದ ಮೇಲೆ ಮಲಗಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಆ ಆಸ್ಪತ್ರೆಯಲ್ಲಿ ಬೆಡ್​​ಗಳ ಕೊರತೆಯಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಬೆಡ್ ಖರೀದಿಸುವ ಸಲುವಾಗಿ ಸೂಕ್ತ ಅನುದಾನವನ್ನು ಶೀಘ್ರವೇ ಬಿಡುಗಡೆ ‌ಮಾಡಲಾಗುವುದು ಎಂದು ಶ್ರೀರಾಮುಲು ಆಶ್ವಾಸನೆ ನೀಡಿದ್ದಾರೆ.

ABOUT THE AUTHOR

...view details