ಕರ್ನಾಟಕ

karnataka

ETV Bharat / state

ಶೆಟ್ಟರ್ ರಾಜೀನಾಮೆಯಿಂದ ನಷ್ಟವಿಲ್ಲ.. ಪಕ್ಷಕ್ಕೆ ಜೀರ್ಣಿಸಿಕೊಳ್ಳುವ ಶಕ್ತಿಯಿದೆ: ಸಿಎಂ ಬೊಮ್ಮಾಯಿ - ಸಿಎಂ ಬೊಮ್ಮಾಯಿ

ಸತಃ ಅಮಿತ್​ ಶಾ ಹೇಳಿದರೂ ಶೆಟ್ಟರ್​​ ಕೇಳಲಿಲ್ಲ - ಪಕ್ಷ ಬಿಟ್ಟು ಹೋಗಿರುವುದಕ್ಕೆ ಮುಂದೆ ಪಶ್ಚಾತ್ತಾಪ ಪಡುತ್ತಾರೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Apr 17, 2023, 7:25 AM IST

ಶೆಟ್ಟರ್ ರಾಜೀನಾಮೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ..

ವಿಜಯನಗರ: ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದರಿಂದ ನಷ್ಟವಿಲ್ಲ. ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೊಸಪೇಟೆಯಲ್ಲಿ ನಿನ್ನೆ(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಮೋದಿಯವರು ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಸಿಎಂ ಬದಲಾವಣೆ ಮಾಡೋ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ ಎಂದರು.

ಯುವಕರಿಗೆ ಅವಕಾಶ:ಹಲವಾರು ಸರ್ವೇ ಮತ್ತು ಬೇರೆ ಬೇರೆ ಕಾರಣಗಳಿಗೆ ಬದಲಾವಣೆ ಆಗಿದೆ. ಪಕ್ಷಕ್ಕೆ ಅದನ್ನು ನಿಭಾಯಿಸುವ ಶಕ್ತಿ ಇದೆ. ಕೆಲವು ಹಿರಿಯರು ತಾವೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆನಂದ್​​ ಸಿಂಗ್ ಅವರಿಗೆ ವಯಸ್ಸು ಇತ್ತು. ಅವರ ಜತೆ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಸ್ ​ಯಡಿಯೂರಪ್ಪ ಅವರು ಯುವಕರಿಗೆ ಅವಕಾಶ ಮಾಡಿಕೊಟ್ಟರು. ಶೆಟ್ಟರ್ ಸಹ ಯುವಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಅವರಿಗೆ ಪಕ್ಷ ದೆಹಲಿ ಮಟ್ಷದಲ್ಲಿ ದೊಡ್ಡ ಜವಾಬ್ದಾರಿ ಕೊಡುವ ಭರವಸೆ ನೀಡಲಾಗಿತ್ತು. ಅವರ ಶಾಸಕರಾಗಲು ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಇಂತಹ ನಾಯಕರು ಯಾರೇ ಪಕ್ಷ ಬಿಟ್ಟು ಹೋದರು ಅವರಿಂದ ಯಾವುದೇ ನಷ್ಟವಿಲ್ಲ. ಅವರಿಗೆ ಪಕ್ಷ ಕೊಟ್ಟ ಸ್ಥಾನಮಾನಗಳನ್ನು ನೋಡಿದರೆ ಅವರು ಹೈಕಮಾಂಡ್ ಜೊತೆ ಮಾತನಾಡಿ, ಸ್ಥಾನಮಾನ ಪಡೆದುಕೊಳ್ಳಬೇಕಾಗಿತ್ತು ಎಂದು ಸಿಎಂ ಹೇಳಿದರು.

ಮುಂದೆ ಪಶ್ಚಾತ್ತಾಪ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತಹಂತವಾಗಿ ಬದಲಾವಣೆ ಆಗುತ್ತದೆ. ಬಿಜೆಪಿಯಲ್ಲಿ ಲಿಂಗಾಯತರ ಕೋಟೆ ಭದ್ರವಾಗಿದೆ. ಯಡಿಯೂರಪ್ಪನವರು ನನ್ನ ಸಮೇತವಾಗಿ ಸಾಕಷ್ಟು ನಾಯಕರನ್ನು ಬೆಳೆಸಿದ್ದಾರೆ. ಕೆಲವರು ಪಕ್ಷ ಬಿಟ್ಟು ಹೋಗಿರುವುದಕ್ಕೆ ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬಿಎಸ್​ವೈ ಕೆಜೆಪಿ ಕಟ್ಟಿದ್ದು ಯಾಕೆ- ಶೆಟ್ಟರ್​ ಪ್ರಶ್ನೆ: ರಾಜೀನಾಮೆ ವಿಚಾರಕ್ಕೆ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶೆಟ್ಟರ್​ "ಬಿಜೆಪಿಯಲ್ಲಿ ಇದ್ದುಕೊಂಡೇ ಬಂಡಾಯವಾಗಿ ಸ್ಪರ್ಧೆ ಮಾಡಲಾಗದು. ಅದಕ್ಕೆ ಕಾನೂನು ತೊಡಕಿದೆ. ನನ್ನನ್ನು ಈಗಾಗಲೇ ಸಂಘದ ಹಲವರು ಸಂಪರ್ಕ ಮಾಡಿದ್ದಾರೆ. ನನ್ನ ಪರಿಸ್ಥಿತಿಯೀಗ ಸಣ್ಣ ಸ್ಥಾನಕ್ಕಾಗಿ, ಟಿಕೆಟ್‌ಗಾಗಿ ಫೈಟ್ ಮಾಡುವಂತಾಗಿದೆ. ಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ. ವಿವಿಧ ಸಂದರ್ಭಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಚಿರಋಣಿ. ಪಕ್ಷ ಕೊಟ್ಟ ಅಧಿಕಾರಕ್ಕಾಗಿ, ನಾನೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪನವರಿಗೂ ಪಕ್ಷ ಸರಿಯಾದ ಸ್ಥಾನಮಾನ ಕೊಟ್ಟಿತ್ತು. 2012ರಲ್ಲಿ ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದ್ದೇಕೆ? ನನಗೆ ಈಗ ಅಪಮಾನ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ:2012ರಲ್ಲಿ ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದು ಯಾಕೆ?: ಜಗದೀಶ್​ ಶೆಟ್ಟರ್

ಹತ್ತು ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗಿದೆ: ಜಗದೀಶ್​ ಶೆಟ್ಟರ್, ಲಕ್ಷ್ಮಣ್​ ಸವದಿಯಂಥವರು ಪಕ್ಷ ಬಿಟ್ಟು ಹೋಗುವುದರಿಂದ ಬಿಜೆಪಿ ಸ್ವಚ್ಛವಾಗುತ್ತದೆ. ಇಂತಹ ಹತ್ತು ನಾಯಕರನ್ನು ತಯಾರಿಸುವ ಶಕ್ತಿ ಪಕ್ಷಕ್ಕಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಸೋತ ವ್ಯಕ್ತಿಯನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಈಗ ಪಕ್ಷ ಬಿಟ್ಟು ಹೋಗಿ ಪಕ್ಷದ ಬಗ್ಗೆ ಕೀಳಾಗಿ ಮಾತಾಡುತ್ತಿದ್ದಾರೆ. ಜಗದೀಶ ಶೆಟ್ಟರ್​ ಎಲ್ಲ ಹುದ್ದೆಗಳನ್ನು ಅನುಭವಿಸಿದವರು. ಎಲ್.ಕೆ.ಅಡ್ವಾಣಿ ಅವರಷ್ಟು ಇವರು ಯಾರೂ ತ್ಯಾಗ ಮಾಡಿದವರಲ್ಲ ಎಂದರು.

ಇದನ್ನೂ ಓದಿ:ಶೆಟ್ಟರ್, ಸವದಿಯಂತಹ ಹತ್ತು ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗಿದೆ: ರಮೇಶ್​ ಜಾರಕಿಹೊಳಿ

ABOUT THE AUTHOR

...view details