ಬಳ್ಳಾರಿ: ಲಾರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕ್ಲೀನರ್ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎನ್.ಯರಿಸ್ವಾಮಿ (20) ಮೃತ ಯುವಕ.
ಸಂಡೂರು ಪಟ್ಟಣದ ಭುಜಂಗನಗರ ಬೈಪಾಸ್ ರಸ್ತೆಯಲ್ಲಿ ಇವರಿದ್ದ ಲಾರಿ ಅ. 11ರಂದು ಅಪಘಾತವಾಗಿತ್ತು. ಯುವಕನ ತಂದೆ ದೇವೇಂದ್ರಪ್ಪ ಲಾರಿ ಚಾಲನೆ ಮಾಡುತ್ತಿದ್ದರು. ಅಪಘಾತದಲ್ಲಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.